December 4, 2024

Bhavana Tv

Its Your Channel

ಸಾರಿಗೆ ನೌಕಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಬಗ್ಗೆ ಸಮಿತಿ ರಚಿಸಿ ನಿರ್ಧಾರ -ಸಾರಿಗೆ ಸಚೀವ ಲಕ್ಷಣ ಸವದಿ

ಹೊನ್ನಾವರ ಬಸ್ ನಿಲ್ದಾಣ ಶಂಕುಸ್ಥಾಪನೆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ಸಾರಿಗೆ ನೌಕಕರ ಬಹಳ ವರ್ಷದ ಬೇಡಿಕೆಯಾದ ಸರ್ಕಾರಿ ನೌಕರರೆಂದು ಪರಿಗಣಿಸುವ ಬಗ್ಗೆ ಈಗಾಗಲೇ ಮನವಿ ನೀಡಿದ್ದಾರೆ. ಇದರ ಬಗ್ಗೆ ಅಧಯಯನ ನಡೆಸಿ ತಜ್ಞರ ಸಮೀತಿ ರಚಿಸಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದೆ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಲಾಭದಾಯಕವಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ಕೆಲ ಜಿಲ್ಲಾ ಉಸ್ತುವಾರಿ ಸಚೀವರ ಅಸಮಧಾನದ ಬಗ್ಗೆ ಪ್ರಶ್ನೆಸಿದಾಗ ಈಗಾಗಲೇ ಮುಖ್ಯಮಂತ್ರಿಗಳು ಚರ್ಚಿಸಿದ್ದು ಮುಂದಿನ ದಿನದಲ್ಲಿ ಬಗೆಹರಿಯಲಿದೆ. ಪ್ರತಿ ಜಿಲ್ಲೆಯ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಬಗೆಹರಿಸುತ್ತೇನೆ. ಜನಪರ ಆಡಳಿತ ನೀಡುವುದು ನಮ್ಮ ಮುಂದಿನ ಗುರಿ ಎಂದರು.
ಹೊನ್ನಾವರದಲ್ಲಿ ಸಾರಿಗೆ ಸಚೀವರ ಆಗಮನದ ಹಿನ್ನಲೆಯಲ್ಲಿ ಖಾಸಗಿ ಟೆಂಪೋ ನಿಲುಗಡೆಗೆ ಆರ್.ಟಿ.ಓ ಅನುಮತಿ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದಾಗ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

error: