March 29, 2024

Bhavana Tv

Its Your Channel

ಹೊನ್ನಾವರದಲ್ಲಿ ಶರಾವತಿ ಬಳಕೆದಾರರ ಸಭೆ

dig

ಮೀನುಗಾರಿಕೆಯನ್ನು ನಂಬಿ ಬದುಕನ್ನು ಸಾಗಿಸುತ್ತಿದ್ದವರ ಆತಂಕಕ್ಕೆ ಕಾರಣವಾದ ಶರಾವತಿ ಅಳಿವೆ ಸಮೀಪದ ಖಾಸಗಿ ವಾಣಿಜ್ಯ ಬಂದರಿಗೆ ಸಂಭದಿಸಿದAತೆ ವಿಚಾರ ವಿನಿಮಯ ಸಭೆಯಲ್ಲಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಜೊತೆ ರಾಷ್ಟçಪತಿಗೆ ಸಹಿ ಅಭಿಯಾನ ನಡೆಸಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಯಿತು.

ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಭೆಯಲ್ಲಿ ಶರಾವತಿ ಅಳವೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು ನಿರ್ಮಾಣದ ಬಳಿಕ ಆಗುವ ದುಷ್ಪರಿಣಾಮದ ಕುರಿತು ಚರ್ಚಿಸಲಾಯಿತು. ಕಂಪನಿ ಆರಂಭದಲ್ಲಿ ಆಹಾರ ಸಾಮಗ್ರಿ ರಫ್ತು ಮಾಡುವ ಬಂದರು ಎಂದು ಸುತ್ತಮುತ್ತಲಿನ ನಿವಾಸಿಗಳನ್ನು ನಂಬಿಸಿ ಇದೀಗ ರಾಸಾಯನಿಕ ಗೊಬ್ಬರ ಸಾಗಾಟ, ಕಬ್ಬಿಣದ ಅದಿರು ರಫ್ತುಮಾಡುವ ಬಂದರು ಎನ್ನುವ ಮಾಹಿತಿ ಮೀನುಗಾರ ಸೇರಿದಂತೆ ಸುತ್ತಮುತ್ತಲೂ ವಾಸಿಸುವ ಜನರ ನಿದ್ದೆಗೆಡಿಸಿತ್ತು. ಇದರ ವಿರುದ್ದ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಬಂದರು ನಿರ್ಮಾಣವಾದಲ್ಲಿ ಶರಾವತಿ ನದಿಯನ್ನು ವಿಷಮುಕ್ತಗೊಳೀಸುವ ಸಾಧ್ಯತೆ ದಟ್ಟವಾಗಿದ್ದು ಇದರಿಂದ ಜನಜೀವನದ ಮೇಲೆಕೆಟ್ಟ ಪರಿಣಾಮ ಬೀರಲಿದೆ. ಕೇವಲ ಮೀನುಗಳಿಗೆ ಮೀನುಗಾರಿಗೆ ಮಾತ್ರ ಸಮಸ್ಯೆ ಉಂಟಾಗದೆ ತಾಲೂಕಿನ ಸಾರ್ವಜನಿಕರ ಆರೋಗ್ಯದ ಸಮಸ್ಯೆ ಕಾಡಲಿದೆ ಎಂದು ಸಭೆಯ ಗಮನಕ್ಕೆ ತಂದಾಗ ಸರ್ವಾನುಮತದಿಂದ ಕೋರ್ಟ ಮೊರೆ ಹೋಗಿ ತಡೆಯಾಜ್ಞೆ ತರಲು ಒಪ್ಪಿಗೆ ಸೂಚಿಸಲಾಯಿತು.
ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಬಂದರು ತಡೆ ಸಾಧ್ಯವಿಲ್ಲ. ಜನಪ್ರತಿನಿಧಿಗಳು ಅಧಿಕಾರ ಇದ್ದಾಗ ಒಂದುರೀತಿ ಅಧಿಕಾರ ಇಲ್ಲದಾಗ ಇನ್ನೊಂದು ರೀತಿ ಹೇಳುತ್ತಾರೆ. ಕೇಂದ್ರ ಸರ್ಕಾರದ ಯೋಜನೆ ಆಗಿರುದರಿಂದ ಒರ್ವ ಶಾಸಕ ಅಥವಾ ಸಂಸದರಿAದ ತಡೆ ಮಾಡಲು ಸಾಧ್ಯವಿಲ್ಲ. ಮೀನುಗಾರರೆಲ್ಲರೂ ಒಗ್ಗಟ್ಟಾಗಿ ನ್ಯಾಯಾಲಯದ ಮೊರೆ ಹೋಗಿ ತಡೆ ತರಬಹುದು. ದೇಶದಲ್ಲಿ ನದಿತೀರದಲ್ಲಿ ಬೃಹತ್ ಬಂದರು ಕಾಣುವುದಿಲ್ಲ. ಮೀನುಗಾರಿಕೆ ಸ್ಥಳ ಹೊರತುಪಡಿಸಿ ಸಮುದ್ರತೀರದಲ್ಲಿ ಈ ಬಂದರು ಮಾಡಬಹುದು. ನಮ್ಮ ತಾಲೂಕಿನಲ್ಲಿಯೇ ಧಾರೇಶ್ವರ ಅಥವಾ ಮಂಕಿ ಸಮೀಪದ ಸಮುದ್ರತೀರದಲ್ಲಿ ಅವಕಾಶಗಳಿವೆ. ಇನ್ನೊಂದು ಮಾರ್ಗವೆಂದರೆ ಎಲ್ಲರೂ ಒಗ್ಗಟ್ಟಾಗಿ ಸಹಿ ಅಭಿಯಾನ ನಡೆಸಿ ವಿರೋಧದ ಕುರಿತು ರಾಷ್ಟçಪತಿಗಳ ಗಮನ ಸೆಳೆಯಬಹುದು ಎಂದರು.

ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಜಾತಿಮತ ಬಿಟ್ಟು ನಮ್ಮ ಊರಿನ ಉಳಿಸಿಕೊಳ್ಳುವ ಅಗತ್ಯವಿದೆ. ಎಲ್ಲವನ್ನು ಕಳೆದುಕೊಂಡು ಬಿಪಿಎಲ್ ಕಾರ್ಡ ಹಾಗೂ ಆರೊಗ್ಯಕಾರ್ಡನಿಂದ ಜೀವನ ನಡೆಸಲು ಸಾಧ್ಯವಿಲ್ಲ. ಆಗ ಬ್ರೀಟಿಷರನ್ನು ಓಡಿಸಲು ಮಾಡು ಇಲ್ಲವೇ ಮಡಿ ಎನ್ನುವಂತೆ ಈ ಕಂಪನಿ ವಿರುದ್ದ ಒಗ್ಗಟ್ಟಾಗಿ ಹೋರಾಡೋಣ. ನಮ್ಮ ಜಿಲ್ಲೆ ನೌಕಾನೇಲೆ, ಹೆದ್ದಾರಿ, ರೈಲ್ವೆಯಿಂದ ಈಗಾಗಲೇ ಹಲವು ಪ್ರದೇಶ ಕಳೆದುಕೊಂಡಿದ್ದೇವೆ ಇದರಿಂದ ಇಡೀ ಹೋನ್ನಾವರವೇ ಸಮಸ್ಯೆಯೆ ಸುಳಿಗೆ ಸಿಲುಕಲಿದೆ ಈಗಲೇ ಎಚ್ಚೆತ್ತುಕೊಳ್ಳೊಣ ಎಂದರು.
ಕಾರ್ಯಕ್ರಮದ ಆಯೋಜಕರಲ್ಲಿ ಒರ್ವರಾದ ಅಶೋಕ ಕಾಸರಕೋಡ ಮಾತನಾಡಿ ನಮಗೆ ಈ ಹಿಂದೆ ಕಿರುಬಂದರು ಮಾಡುತ್ತೇವೆ. ಅಳಿವೆ ಸಮಸ್ಯೆ ಮೊದಲು ಪರಿಹಾರ ನೀಡುತ್ತೇವೆ. ಸ್ಥಳಿಯರಿಗೆ ಉದ್ಯೋಗ ನೀಡುತ್ತೇವೆ. ಪರಿಸರದ ಮೇಲೆ ದುಷ್ಪರಿಣಾಮದ ಯಾವುದೇ ಸನ್ನಿವೇಶ ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ನಮ್ಮ ಕಣ್ಣ ಮುಂದೆ ಮೀನುಗಾರರು ಮತ್ತು ಬೋಟ್ ಅನಾಹುತ ನೋಡಿರುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ನೆಮ್ಮದಿಯಿಂದ ಇದ್ದೇವು ಈಗ ನಮ್ಮ ನಿದ್ದೆಗೆಡಿಸಿದೆ. ೯೯ ಎಕರೆ ಜಾಗ ಹಸ್ತಾಂತರವಾಗಿದ್ದರೂ ೪೦ ಎಕರೆ ಪ್ರದೇಶಕ್ಕೆ ಕಂಪೌಡ್ ಹಾಕಿರುವುದು ಉಳಿದ ಪ್ರದೇಶ ಜನವಸತಿ ಪ್ರದೇಶವೆನ್ನುವ ದೃಷ್ಟಿಯಿಂದ ಬಿಡಲಾಗಿದೆ. ಅಲ್ಲದೇ ಇದರಲ್ಲಿ ೩೫ ಎಕರೆ ಕಲ್ಲಿದ್ದಲು ಮ್ಯಾಂಗನೀಸ್, ರಸಗೊಬ್ಬರ ಶೇಖರಣೆಗೆ ಬಳಸುದರಿಂದ ಹಾನಿ ಕಟ್ಟಿಟ್ಟ ಬುತ್ತಿ ಎಂದು ಸಮಸ್ಯೆ ಬಗ್ಗೆ ವಿವರಿಸಿದರು.
ರೋಟರಿ ಅಧ್ಯಕ್ಷ ದಿನೇಶ ಕಾಮತ್, ಕೃಷ್ಣಮೂರ್ತಿ ಭಟ್ ಶಿವಾನಿ, ವಸಂತ ಕರ್ಕಿಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ದಿಮೆದಾರರ ಜೆ.ಟಿ.ಪೈ ಮಾತನಾಡಿ ೨೦೦೮ರಲ್ಲಿ ಕಂಪನಿ ಹೊನ್ನಾವರಕ್ಕೆ ಕಾಲಿಟ್ಟರು ೧೦ ವರ್ಷಗಳ ಕಾಲ ತಟಸ್ಥವಾಗಿದ್ದು ಕಳೆದ ಒಂದುವರೆ ವರ್ಷದಿಂದ ಕಾಮಗಾರಿ ಪ್ರಾರಂಭಿಸಿದೆ. ನಮ್ಮ ತಾಲೂಕಿನ ದುರಂತವೆAದರೆ ಯಾವುದೇ ಯೋಜನೆ ಬಂದರೂ ಸಂಭದಿಸಿದ ಮಾಹಿತಿ ಕೊರತೆಯಿಂದ ನಾವು ಕೊನೆಗೆ ಎಚ್ಚೆತ್ತಕೊಳ್ಳಬೇಕಾದ ದುಸ್ಥಿತಿ ಎದುರಾಗುತ್ತಿದೆ. ಆರಂಭದ ಕಿರು ಬಂದರು ಇಂದು ವಾಣಿಜ್ಯ ಬಂದರಾಗಿದೆ. ಇದರಿಂದ ಅನಾಹುತ ಸಂಭವಿಸುದರಿAದ ನಾವೆಲ್ಲರೂ ನ್ಯಾಯಲಾಯದ ಮೊರೆ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.
ಪ್ರಾಸ್ತವಿಕವಾಗಿ ಪರಿಸರ ವಿಜ್ಞಾನಿ ಡಾ. ಪ್ರಕಾಶ ಮೇಸ್ತ ಮಾತನಾಡಿ ಶರಾವತಿ ಅಳಿವೆಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದಾಗಿ ಶರಾವತಿ ನದಿಯ ಮೇಲೆ ಅವಲಂಬಿತವಾದ ಜನಜೀವನಕ್ಕೆ ಮಾರಕವಾಗಲಿದೆ. ಮೀನು, ಆಹಾರ ಬೆಳೆಗಳಿಗೆ ಕಲುಷಿತ ನೀರು ವಿಷಕಾರಕವಾಗಲಿದೆ ಎಂದರು.

ವೇದಿಕೆಯಲ್ಲಿ ಸಗಟುಮೀನು ವ್ಯಾಪಾರ ಸಂಘದ ಗಣಪತಿ ತಾಂಡೇಲ್, ಮೀನುಗಾರ ಮುಖಂಡರಾದ ಅಹ್ಮದ್ ಪಟೇಲ್, ರಾಮಚಂದ್ರ ಹರಿಕಂತ್ರ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯ ಸಾರ್ವಜನಿಕರು ಸಭೆಯಲ್ಲಿ ಕಾಮಗಾರಿ ವಿರುದ್ದ ಸಹಿಯ ಮೂಲಕ ಮುಂದಿನ ಹೋರಾಟಕ್ಕೆ ಬೆಂಬಲ ಸೂಚಿಸಿದರು.

error: