December 22, 2024

Bhavana Tv

Its Your Channel

ಕೋಲಾರಕ್ಕೆ ಡಿ ಸಿ ಎಂ ಅಶ್ವತ್ಧನಾರಾಯಣ ಭೇಟಿ

ಕೋಲಾರ ; ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಾಗಿದ್ದು ಮಂಗಳವಾರ ಕೋಲಾರಕ್ಕೆ ಡಿಸಿಎಮ್ ಡಾ.ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಜನರು ಗುಳೆ ಹೋಗದಂತೆ ಮನವಿ ಮಾಡಿ, ಯಾರೂ ಗುಳೆ ಹೋಗಬಾರದು ಅಂತ ಕಾರ್ಖಾನೆ ಹಾಗೂ ರೈತರಿಗೆ ವಿನಾಯ್ತಿ ನೀಡಲಾಗಿದೆ.
ಗುಳೆ ಹೋಗೋದ್ರಿಂದ ಮತಷ್ಟು ಸಮಸ್ಯೆ ಎದುರಾಗುತ್ತೆ ಎಂದರಲ್ಲದೇ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ.ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗ್ತಿದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿಲ್ಲ,ಕಠಿಣ ನಿಯಮ ಜಾರಿಯಲ್ಲಿದೆ. ಕಾಳಸಂತೆಯಲ್ಲಿ ರೆಮಿಡಿಸಿವರ್ ವ್ಯಾಪಾರ ಆದ್ರೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕೇಸ್ ದಾಖಲಿಸಲಾಗುವುದು. ಅಲ್ಲದೇ ಕೋಲಾರದಲ್ಲಿ ೬ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಶೇಖರಣೆ ಘಟಕ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆಯೆಂದರು.

error: