December 21, 2024

Bhavana Tv

Its Your Channel

ಲಾಕ್ ಡೌನ್ ನಲ್ಲಿ ಬಡವರಿಗೆ ಆಹಾರ ಹಂಚಿ ಮಾನವೀಯತೆ ಮೆರೆದ ಎಸ್.ಪಿ.ಸರೋದೆ.

ಇಳಕಲ್ : ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡಿದ ನಂತರ ಸಾಕಷ್ಟು ಬಡವರಿಗೆ, ಕೂಲಿ ಕಾರ್ಮಿಕರಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಕೂಡ ಕಷ್ಟವಾಗಿದೆ ಇಂತಹ ಸಂದರ್ಭದಲ್ಲಿ ಇಳಕಲ್ ನಗರದ ಎಸ್.ಪಿ.ಸರೋದೆ ಸಿಲ್ಕ್ ಹೌಸ್ ನ ಮಾಲಿಕರಾದ ನಾಗರಾಜ ಸೀತಾರಾಮ. ಸರೋದೆ ಅವರು ಇಂದು ಬಡ ಜನರಿಗೆ ಆಹಾರ ಪೊಟ್ಟಣಗಳನ್ನು ಹಂಚುವ ಮೂಲಕ ಜನರ ಸೇವೆ ಮಾಡುತ್ತಿದ್ದಾರೆ.

ಇಳಕಲ್ಲಿನ ಹಾದಿ ಬಸವ ನಗರ, ಗುರುಲಿಂಗಪ್ಪ ಕಾಲನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಹಂಚಿದರು .
ನಾಗರಾಜ ಅವರು ತಿನ್ನುವ ಅನ್ನದ ಪ್ರತಿಯೊಂದು ಅಗಳಿನ ಮೇಲೆ ತಿನ್ನುವವರ ಹೆಸರಿರುತ್ತದೆ. ಬಡ ಜನರ ಹಸಿವು ನೀಗಲ್ಲಿ ಎಂದು ಹೇಳಿ ಈ ಕಾಯ೯ವು ಜನರಿಗೆ ಪ್ರೇರಣೆಯಾಗಲಿ ಅನ್ನುವುದು ನಮ್ಮ ಕಳಕಳಿ ಎಂದು ಹೇಳಿದರು.
ವರದಿ : ವಿನೋದ ಬಾರಿಗಿಡದ . ಇಳಕಲ್

error: