December 21, 2024

Bhavana Tv

Its Your Channel

ಮಹಾಮಾರಿ ಕೊರೊನಾಗೆ ಕರ್ಪ್ಯೂಗೆ , ಕೋವಿಡ್ ನಿಯಮಕ್ಕೆ ಕ್ಯಾರೆ ಎನ್ನದ ಇಳಕಲ್ ಜನರು.

ಇಳಕಲ್ : ಜಗತ್ತನ್ನೆ ತಲ್ಲಣಿಸಿದ ಮಹಾಮಾರಿ ಕೊರೊನಾ ಕರ್ಪ್ಯೂ ನಡುವೆಯೂ ಇಳಕಲ್ ತರಕಾರಿ ಮಾರ್ಕೇಟ್ ಪುಲ್ ಜಾಮ್ ಆಗಿತ್ತು. ಸೋಮವಾರದಿಂದ ೧೪ ದಿವಸಗಳ ಕಾಲ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಬೆಳ್ಳಂಬೆಳಿಗ್ಗೆಯೇ ತರಕಾರಿ. ದಿನಸಿ ಖರಿದಿಗೆ ಜನರು ಅಂಗಡಿಗಳಲ್ಲಿ ಮಾಸ್ಕ್ ದರಿಸದೆ ಸಾಮಾಜಿಕ ಅಂತರ ಪಾಲನೆ ಮಾಡದೆ ಮುಗಿಬಿದ್ದಿರುವ ದೃಶ್ಯ ಅಲ್ಲಲ್ಲಿ ಕಂಡುಬoದಿತು.
ಇನ್ನೂ ಕೆಲವೊಂದು ಕಡೆ ಕೋವಿಡ್ ನಿಯಮ ಪ್ರಕಾರ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲನೆ ಮಾಡುತಿರುವ ದೃಶ್ಯ ಕಂಡುಬoತು.
ಲಾಕ್ ಡೌನ್ ಆದ್ರೆ ವಸ್ತುಗಳು ಸಿಗತ್ತೊ ಇಲ್ವೊ ಎಂಬ ಭಯದಲ್ಲೆ ರಸ್ತೆಗಿಳಿದಿರುವ ಜನರು ಮಾರ್ಕೆಟ್ ಪುಲ್ ಜಾಮ್ ಆಗಿತ್ತು. ಹಿಗಾಗಿ ಇಳಕಲ್ ನಗರದ ಬಜಾರದಲ್ಲಿ ಮುಂಜಾನೆಯೇ ಜನಜಂಗುಳಿ ಕಂಡುಬoದಿತು.
ಹೀಗಾಗಿ ಬೆಳಗ್ಗೆಯಿಂದಲೇ ನಗರ ಸಭೆ ಅಧಿಕಾರಿಗಳು .ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು.
ಕೋವಿಡ ನಿಯಮ ಪಾಲನೆ ಮಾಡದೆ ಇರುವ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಅವರು ದಂಡವನ್ನು ವಿಧಿಸುವ ದೃಶ್ಯ ಅಲ್ಲಲ್ಲಿ ಕಂಡುಬoದಿತು.
ಆದರೆ ಅದೇನೇ ಇರಲಿ ಕೊರೋನಾ ಎರಡನೆ ಅಲೆ ತೀವ್ರವಾಗಿ ವ್ಯಾಪಿಸುತ್ತಿದೆ. ಹೀಗಾಗಿ ನಾವೆಲ್ಲರೂ ಎಚ್ಚೆತ್ತು ಕೊಳ್ಳುವುದು ಅನಿವಾರ್ಯವಾಗಿದೆ.ಎಲ್ಲವನ್ನೂ ಅಧಿಕಾರಿಗಳೇ ನಿಯಂತ್ರಣ ಮಾಡಲು ಸಾಧ್ಯವಿಲ್ಲ . ಹೀಗಾಗಿ ಸಾಮಾನ್ಯ ಜನರಾದ ನಾವು ಕೂಡ ಕರೋನಾ ನಿಯಮಗಳನ್ನು ಪಾಲನೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.ಅಂದಾಗ ಮಾತ್ರ ಈ ಕರೋನಾ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯ.

ಆದರಿಂದ ಜನರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಕೋವಿಡ್ ನಿಯಮವನ್ನು ಪಾಲನೆ ಮಾಡಲಿ ಎಂಬುದು ನಮ್ಮಭಾವನಾ ವಾಹಿನಿಯ ಅಭಿಪ್ರಾಯ ವಾಗಿದೆ.
ವರದಿ ; ವಿನೋದ ಬಾರಿಗಿಡದ ಇಳಕಲ್.

error: