December 20, 2024

Bhavana Tv

Its Your Channel

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಬಾಗಲಕೋಟೆ ವತಿಯಿಂದ ನಗರದಲ್ಲಿ ಕೋರೋಣ ವಾರಿಯರ್ಸ್ ಗಳಿಗೆ ಆಹಾರ ವಿತರಣೆಯ ಅಳಿಲು ಸೇವೆ.

ಬಾಗಲಕೋಟೆ ; ಇಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಬಾಗಲಕೋಟೆ ವತಿಯಿಂದ ನಗರದಲ್ಲಿ ಕೋರೋಣ ವಾರಿಯರ್ಸ್ ಪೊಲೀಸ್ ಇಲಾಖೆ, ಬೀದಿ ಬದಿ ಇರತಕ್ಕಂತಹ ಭಿಕ್ಷುಕರಿಗೆ, ಮತ್ತು ಜಿಲ್ಲೆಯಿಂದ ದುಡಿಯಲು ಬಂದAತಹ ಬಡಕುಟುಂಬಗಳಿಗೆ ,ಮತ್ತು ಲಾರಿ ಚಾಲಕರಿಗೆ, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ವತಿಯಿಂದ ಆಹಾರ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಸಿದ್ದು ಬಾವಿಕಟ್ಟಿ ಯವರು ಮಾತನಾಡಿ ಈಡಿ ದೇಶವನ್ನೇ ಕರೋನಾ ಹೆಮ್ಮಾರಿ ತಲ್ಲಣಗೊಳಿಸಿದ್ದು ಇದರಿಂದ ಯಾರು ಭಯಪಡದೆ ಮುಂಜಾಗ್ರತೆಯಾಗಿ ಸಾಮಾಜಿಕ ಅಂತರ,ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಆರೋಗ್ಯ ಕಾಪಾಡಿಕೊಳ್ಳುಳಬೇಕೆಂದು ಮಾತನಾಡಿದರು.ಮತ್ತು ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾಧ್ಯಕ್ಷರಾದ ಮಂಜು ಹೊರಕೇರಿಯವರು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶಾಂತಾ ಸೋಮಾಪುರ, ಯುವ ಘಟಕದ ಅಧ್ಯಕ್ಷರಾದ ಅನಿಲ ಮೇಟಿ, ತಾಲೂಕ ಅಧ್ಯಕ್ಷರಾದ ದ್ಯಾಮಣ್ಣ ವಾಲಿಕಾರ್. ಲಕ್ಷ್ಮಣ್ ಸನ್ನಿಧಿ. ರಾಜು ಮೇಟಿ. ಬರಮಪ್ಪ ಕಟಗಿ. ನಿಂಗೂ ಪೂಜಾರ್. ರಿಯಾಜ್ ಇನ್ನೂ ಮುಂತಾದ ಸದಸ್ಯರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: