ಬಾದಾಮಿ ; ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು, ಸೇವಾಭಾರತಿ ಬಾದಾಮಿ ಸಹಯೋಗದಲ್ಲಿ ,ಜಗತ್ತಿನಲ್ಲಿ ಕರೋನ ಮಹಾಮಾರಿಯ ಎರಡನೇ ಅಲೆ ಹೆಚ್ಚಾಗುತ್ತಿದೆ, ಇದಕ್ಕೆ ನಮ್ಮ ಕರುನಾಡು ತತ್ತರಿಸಿ ನಲುಗಿ ಹೋಗಿದೆ, ಇಷ್ಟೇ ಅಲ್ಲದೆ ಸಾವಿನ ಸಂಖ್ಯೆಗಳು ಕೂಡ ಅಷ್ಟೇ ಹೆಚ್ಚುತ್ತಿವೆ. ಅದಕ್ಕಾಗಿಯೇ ಕರೋನ ವಿರುದ್ಧ ಹೋರಾಡಲು ಬಾದಾಮಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯವರಿಗೆ ಕೊಲ್ಲಾಪುರದ ಕನ್ನೇರಿ ಮಠದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇಮ್ಯುನಿಟಿ ಬೂಸ್ಟರ್ ಔಷಧಿ ಯನ್ನ ವಿತರಿಸಲಾಯಿತು. ಈ ಕಾರ್ಯದಲ್ಲಿ ಆರ್. ಎಸ್. ಎಸ್.ನ ಸ್ವಯಂ ಸೇವಕರಾದ ಎಸ್ ಬಿ ಪವಾಡಶೆಟ್ಟಿ, ಪ್ರವೀಣ್, ಮುದಕನಗೌಡರ, ಸುಭಾಸ್, ಮಂಜು, ವೆಂಕಟೇಶ್ ಮುಂತಾದ ಯುವಮಿತ್ರರು ಪಾಲ್ಗೊಂಡಿದ್ದರು. ಕೋವಿ ಡ್ ಹಬ್ಬುತ್ತಿರುವ ಇಂಥ ಸಮಯದಲ್ಲಿ ಜನಹಿತ ಕಾಯುವ ಕೆಲಸ ಮಾಡುತ್ತಿರುವ ಈ ಯುವಮಿತ್ರರ ಕಾರ್ಯ ಶ್ಲಾಘನೀಯವಾದುದು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ