December 21, 2024

Bhavana Tv

Its Your Channel

ಲಾಕ್ ಡೌನ್ ಪ್ರಧಾನಮಂತ್ರಿಗಳಿಗೆ ಪತ್ರ ಚಳುವಳಿ

ಇಳಕಲ್ ; ಮಹಾಮಾರಿ ಕರೋನಾ ಎರಡನೆಯ ಅಲೆ ತೀವ್ರವಾಗಿರುವ ಹಿನ್ನೆಲೆ ಇಳಕಲ್ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಯಿ0ದ ಪ್ರಧಾನಮಂತ್ರಿಗಳಿಗೆ ಪತ್ರ ಚಳುವಳಿ ನಡೆಸಿದರು.

ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟ ಬಾಗಲಕೋಟ್ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಬೀದಿ ಬದಿ ವ್ಯಾಪಾರಸ್ತರಿಗೆ 10.000 ರೂ ಕೇಂದ್ರ ಸರ್ಕಾರದಿಂದ ಸಹಾಯ ಮಾಡಬೇಕು ಹಾಗೂ ಪ್ರತಿ ದಿನ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ನಿಗದಿತ ಸಮಯ ಕೊಡಬೇಕು ಎಂದು ಬೀದಿ ಬದಿ ವ್ಯಾಪಾರಸ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ರಿಯಾಜ ಮಕಾಂದಾರ್, ಇಳಕಲ್ ತಾಲೂಕಿನ ಅಧ್ಯಕ್ಷರಾದ ಪವಾಡೆಪ್ಪ ಚಲುವಾದಿ ತಿಳಿಸಿದರು.

ವರದಿ: ವಿನೋದ ಬಾರಿಗಿಡದ ಇಳಕಲ್

error: