December 21, 2024

Bhavana Tv

Its Your Channel

ಇಳಕಲ್ ನಗರದ ಪ್ರಮುಖ ಬೀದಿಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ.

ಇಳಕಲ್ : ಮಹಾಮಾರಿ ಕೊರೋನಾ ಎರಡನೆಯ ಅಲೆಯ ಅಬ್ಬರ ಜೋರಾಗಿದೆ.ಇದನ್ನು ನಿಯಂತ್ರಣ ತರುವಲ್ಲಿ ಇಳಕಲ್ ತಾಲ್ಲೂಕಾಡಳಿತ ನಗರಸಭೆ .ಹಾಗೂ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಹೀಗಾಗಿ ಇಳಕಲ್ ನಗರ ಸಂಪೂರ್ಣ ಲಾಕ್ ಆಗಿರುವುದರಿಂದ ಕಾಯಿಪಲ್ಲೆ ಮಾರುಕಟ್ಟೆ ಹಾಗೂ ಆ ಪ್ರದೇಶದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ಸ್ಯಾನಿಟೈಜರ್ ಸಿಂಪಡನೆ ಮಾಡಿದರು.

ಕಾಯಿಪಲ್ಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ನಗರಸಭೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಸ್ಯಾನಿಟೈಸರ್ ಸಿಂಪಡಿಸಿದರು.

ಬೆಳ್ಳAಬೆಳಗ್ಗೆಯೆ ನಗರಸಭೆಯವರು ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಕೊರೋನಾ ನಿಯಂತ್ರಣ ತರುವಲ್ಲಿ ಕಾರ್ಯನಿರತರಾಗಿದ್ದಾರೆ.

ವರದಿ : ವಿನೋದ ಬಾರಿಗಿಡದ ಇಳಕಲ್

error: