ಬಾದಾಮಿ ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಬಾದಾಮಿ ಪೊಲೀಸ್ ಇಲಾಖೆ ಹಾಗೂ ಕೋವಿಡ್ ಕೇರ್ ಸೆಂಟರ್ ಹಾಗೂ ಆರೋಗ್ಯ ಇಲಾಖೆಗಳಿಗೆ ಆಹಾರ,ನೀರು ಬಿಸ್ಕೆಟ್ ವಿತರಣೆ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರು ಬಾದಾಮಿ ಮತಕ್ಷೇತ್ರದ ಶಾಸಕರು ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಬಾದಾಮಿ ನಗರದ ಪೊಲೀಸ್ ಇಲಾಖೆಗೆ ಹಾಗೂ ತಾಲೂಕಾ ಆರೋಗ್ಯ ಇಲಾಖೆಗೆ ಮತ್ತು ತಾಲೂಕಿನ ಚಿಕ್ಕ ಮುಚ್ಚಳಗುಡ್ಡ ದಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ತೆರಳಿ ಆಹಾರ ಕುಡಿಯುವ ನೀರು, ಬಿಸ್ಕೆಟ್ ವಿತರಿಸಿ ಕರೋನ್ ಸೊಂಕಿತರಿಗೆ ಹಾಗೂ ಕರೋನ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಗೆ, ಆರೋಗ್ಯ ಇಲಾಖೆಗೆ ಸಿದ್ದರಾಮಯ್ಯ ನವರ ಅಭಿಮಾನಿ ಬಳಗದವರು ಅಳಿಲು ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಆರ್. ಎ ಫ್.ಬಾಗವಾನ ,ರಂಗು.ಪಿ. ಗೌಡರ್ , ಶಿವಕುಮಾರ್ ಮಣ್ಣೂರ್, ಯುವಮುಖಂಡರಾದ ಸುನೀಲ್ ಮೋಹಿತೆ, ಬಾಬು ಕಲಾಸಿ, ಹರ್ಷ ಆರ್.ಕೆ, ಪರಶು ಭಜಂತ್ರಿ, ಮಂಜುನಾಥ್ ಕಲಾಲ, ಇನ್ನೂ ಮುಂತಾದ ಅಭಿಮಾನಿ ಬಳಗದ ಯುವ ನಾಯಕರು ಪಾಲ್ಗೊಂಡಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ