December 21, 2024

Bhavana Tv

Its Your Channel

ಬಾದಾಮಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್೧೦೦ ನಾಟ್ ಔಟ್ ಪ್ರತಿಭಟನೆ.

ಬಾಗಲಕೋಟೆ ; ಜಿಲ್ಲೆಯ ಬಾದಾಮಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನ ಬಳಕೆ ವಸ್ತುಗಳ ದರ ಏರಿಕೆಯ ಕ್ರಮಗಳನ್ನ ಖಂಡಿಸಿ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮ ಖಂಡಿಸಿ ಬಾದಾಮಿ ನಗರದ ಪೆಟ್ರೋಲ್ ಬಂಕ್ ಎದುರಿಗೆ ಮುಖಂಡರಿAದ ಪ್ರತಿಭಟನೆ ಮಾಡಲಾಯಿತು.ಖಾಲಿ ಸಿಲಿಂಡರ್ ಹಿಡಿದು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ (ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ *ಶ್ರೀ ಮಹೇಶ ಎಸ್ ಹೊಸಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ ಡಿ ಯಲಿಗಾರ ಪುರಸಭೆ ಸದಸ್ಯರಾದ ಶ್ರೀ ಆರ್ ಎಫ್ ಬಾಗವಾನ, ಮುಖಂಡರಾದ *ಶ್ರೀ ಎಸ್ ಡಿ ಜೋಗಿನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಎಮ್ ಜಿ ಕಿತ್ತಲಿ , ಪುರಸಭೆ ಅಧ್ಯಕ್ಷರಾದ ಶ್ರೀ ಮಂಜುನಾಥ ಹೊಸಮನಿ, ಮುಖಂಡರಾದ ಶ್ರೀ ಎಮ್ ಎಮ್ ಗಾರವಾಡ, ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶ್ರೀ ವಿಜಯ ಹೊರಪೇಟಿ,ಮುಖಂಡರಾದ ಶ್ರೀ ಮಹಾಂತೇಶ ಹಟ್ಟಿ, ಶ್ರೀ ರಜಾಕ ರಾಜೂರ , ಶ್ರೀ ಕಮ್ಮಾರ , ಶ್ರೀ ಸಾಬಣ್ಣ ಹೊಸಗೌಡ್ರ , ಶ್ರೀ ರಾಜಾಪೂರ, ಶ್ರೀ ಪರಶುರಾಮ ರೋಣದ ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ

error: