December 21, 2024

Bhavana Tv

Its Your Channel

೧೪ ದಿನ ಹೋಮ್ ಕ್ವಾರಂಟೈನ್ ಮುಗಿಸಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಶಾಸಕರು.

ಇಳಕಲ್ ; ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರು ಅವಳಿ ನಗರಗಳಾದ ಇಳಕಲ್ ಮತ್ತು ಹುನಗುಂದ ಸರಕಾರಿ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಬೇಟಿ ನೀಡಿ ವೈದ್ಯಾಧಿಕಾರಿಗಳ ಜೋತೆ ಸುದೀರ್ಘವಾಗಿ ಚರ್ಚಿಸಿದರು, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಕೇಲವು ಸಮಸ್ಯಗಳನ್ನು ಹಾಗು ನಿರಂತರ ವಾಗಿ ಆಕ್ಸೀಜನ್ ಸಿಲೇಂಡರಗಳ ಅಲಬ್ಯತೆಬಗ್ಗೆ ಅಳಲನ್ನು ಆಲಿಸಿದ ಶಾಸಕರು ತಾಲೂಕಿನ ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿ ಇಂದ ತಮ್ಮ ಸ್ವಂತ ಖರ್ಚಿನಲ್ಲಿ ತಾಲೂಕಿನಲ್ಲಿ ಆಕ್ಸೀಜನ್ ಸಿಲೇಂಡರ್ ಬೇಕಾಗುವ ದ್ರವ್ಯ (ಲಿಕ್ವೀಡ್) ವ್ಯವಸ್ತೆ ಮಾಡಿದರು. ಕೋವಿಡ್ ನಮ್ಮ ದೇಶವನ್ನು ಬಿಟ್ಟು ಹೋಗುವವರೆಗೂ ಆಕ್ಸಿಜನ್ ಸಿಲಿಂಡರ್ ವೆಚ್ಚ ನಾವೇ ಭರಿಸುತ್ತೇವೆ ಎಂದರು ಮತ್ತು ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆ ಮಾಡಲು ಹಾಗೂ ಇತರೆ ಸಮಸ್ಯಗಳಿಗೆ ಜಿಲ್ಲಾ ಆರೋಗ್ಯ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಇಂದಿನಿAದಲೆ ಸರಕಾರಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ದೊರಕಿಸಿ ಕೊಡುವಂತೆ ವೈಧ್ಯಾಧಿಕಾರಿಗಳಿಗೆ ಆದೇಶಿಸಿದರು.

ಇಳಕಲ್ ನಗರದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಗಳಾದ ಡಾ|| ಚೇತನ ಶ್ಯಾವಿ ಅವರೋಂದಿಗೆ ಮಾತನಾಡಿ ಅವಳಿ ನಗರಗಳಾದ ಇಳಕಲ್ ಮತ್ತು ಹುನಗುಂದ ನಗರಗಳಿಗೆ ೧೨ ರಿಂದ ೧೫ ದಿನಗಳವರಿಗೆ ಆಕ್ಸಿಜನ್ ಸಿಲಿಂಡರ್ ಗಳ ಕೊರತೆ ಇರುವುದಿಲ್ಲ. ೧೫ ದಿನಗಳೊಳಗೆ ಇನ್ನೊಂದು ಟ್ಯಾಂಕರ್ ಆಕ್ಸಿಜನ್
(೧೦ಕೆ.ವಿ.ಎಲ್) ತರಲಾಗುವುದು ಆಕ್ಸಿಜನ್ ಕೊರತೆ ನಮ್ಮ ತಾಲ್ಲೂಕಾ ಆಸ್ಪತ್ರೆಯಲ್ಲಿ ಆಗದ ಹಾಗೆ ನೋಡಿಕೊಳ್ಳುತ್ತೇವೆ ಈ ಕಾರ್ಯ ನಿರಂತರವಾಗಿರುತ್ತದೆ ಎಂದು ಶಾಸಕರು ಹೇಳಿದರು.


ಈ ಸಂದರ್ಬದಲ್ಲಿ ಇಳಕಲ್ ನಗರ ಘಟಕದ ಬಿಜೆಪಿ ಅಧ್ಯಕ್ಷರ ಅರವಿಂದ ಮಂಗಳೂರು ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ ,ನಗರದ ನಗರಸಭೆ ಸದಸ್ಯ ಸುಗೂರೇಶ ನಾಗಲೋಟಿ ಮತ್ತು ನಗರಸಭೆ ಪೌರಾಯುಕ್ತ ಜಗದೀಶ ಹುಲಗೇಜ್ಜಿ ಇನ್ನಿತರರು ಇದ್ದರು.


ವರದಿಗಾರ ವಿನೋದ ಬಾರಿಗಿಡದ ಭಾವನ ಟಿವಿ ಇಳಕಲ್

error: