May 5, 2024

Bhavana Tv

Its Your Channel

ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಪತ್ರಕರ್ತರಿಗೆ ಪ್ಯಾಕೇಜ್ ಘೋಷಣೆ ಮಾಡದೇ ಇರುವುದು ಪತ್ರಿಕಾ ಧರ್ಮಕ್ಕೆ ದ್ರೋಹ ಬಗೆದಂತೆ

ಇಳಕಲ್ಲ : ಕೇಂದ್ರ ಮತ್ತು ರಾಜ್ಯಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರಿಗೆ ಮತ್ತು ಮಾಧ್ಯಮಗಳನ್ನು (ದೃಶ್ಯ ಮಾಧ್ಯಮ )ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಲಾಗಿದೆ .ಕೊನೆಯ ಪಕ್ಷ ಯೋಗಕ್ಷೇಮ ಕಾದರೂ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮಾಜಿ ಶಾಸಕರಾದ ಡಾ.ವಿಜಯಾನಂದ ಎಸ್ ಕಾಶಪ್ಪನರು ನಮ್ಮ ವಾಹಿನಿ ಮೂಲಕ ಸರಕಾರಕ್ಕೆ ಮನವಿ ಮಾಡಿದರು .

ಕೊರೋನ ಎರಡನೆ ಅಲೆಯು ವೇಗವಾಗಿ ಹಬ್ಬುತಿದ್ದು ರಾಜ್ಯ ಹಾಗೂ ದೇಶಗಳಲ್ಲಿ ಸಾವಿನಪ್ರಮಾನ ಹೆಚ್ಚಿನ ಸಂಖ್ಯೆಯಲ್ಲಿ ಆಗುತಿದ್ದು ಇದಕ್ಕೆ ರಾಜ್ಯ ಸರಕಾರವು ರಾಜ್ಯದಲ್ಲಿ ವಿಶೇಷ ಪ್ಯಾಕೆಜನ್ನು ಘೋಷಿಸಿತು ಇದರಲ್ಲಿ ಬಿದಿ ವ್ಯಾಪಾರಸ್ಥರು, ಹೂ ಬೆಳೆಗಾರರು,ಕಮ್ಮಾರರು,ಚಮ್ಮಾರರು, ಆಟೋಚಾಲಕರು ,ಕ್ಯಾಬ್ ಡ್ರೈವರ್, ಕೂಲಿಕಾರ್ಮಿಕರಿಗೆ, ಇನ್ನು ಹಲವಾರು ವ್ಯಾಪಾರಸ್ಥರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಆದರೆ ಪತ್ರಕರ್ತರು, ದೃಶ್ಯ ಮಾಧ್ಯಮದವರು ತಮ್ಮ ಜೀವನದ ಹಂಗನ್ನು ತೊರೆದು ಯಾವುದೇ ಸಂಬಳವಿಲ್ಲದೆ ಪ್ರತಿ ದಿನ ನಗರ ಪಟ್ಟಣ ಮತ್ತು ಗ್ರಾಮಗಳಿಗೆ ಅಲೆದಾಡಿ ಕೊರೋನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಸಂಗ್ರಹಿಸಿ ಸತ್ಯಾಂಶವನ್ನು ಪ್ರಕಟಿಸಿ ಸರಕಾರದ ಕಣ್ಣು ತೆರೆಯುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಿಕ ರಂಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳು ಸಾಕಷ್ಟು ಸಂಕಷ್ಟದಲ್ಲಿದ್ದು ಸರಕಾರ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕೆಂದು ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಸರಕಾರಕ್ಕೆ ಖಂಡಿಸಿದ್ದಾರೆ ..
ವರದಿ :ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: