May 6, 2024

Bhavana Tv

Its Your Channel

ಬಾದಾಮಿ ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು. ಪ್ಯಾಕೇಜ್ ಘೋಷಣೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ಕೈ ಬಿಟ್ಟಿದ್ದಕ್ಕೆ ಸರಕಾರದ ವಿರುದ್ಧ ಆಕ್ರೋಶ.

ಬಾದಾಮಿ ; ಮಾಜಿ ಮುಖ್ಯಮಂತ್ರಿ, ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಅವರು ಬೆಂಗಳೂರಲ್ಲಿದ್ದರೂ ಕ್ಷೇತ್ರದ ಜನರ ಬಗ್ಗೆ ಅಧಿಕಾರಿಗಳಿಂದ, ಮುಖಂಡರಿAದ ಮಾಹಿತಿ ಪಡೆದು ಎರಡು ಬಾರಿ ವಿಡಿಯೋ ಕಾನ್ಫರನ್ಸ್ ಮೂಲಕ ಅವಶ್ಯಕ ಆಕ್ಸಿಜೆನ್, ರೆಮಡಿಸಿವಿರ್ ಇಂಜೆಕ್ಷನ್ ಕೋವಿಡ್ ರೋಗಿಗಳ ಬೇಡಿಕೆ ಅನುಕೂಲ ಕಲ್ಪಿಸಿದ್ದಾರೆ. ಸಿದ್ದರಾಮಯ್ಯನವರು ಅಲ್ಲಿದ್ದೂ ಪ್ರತಿದಿನ ಅಪ್ಡೇಟ್ ಮಾಹಿತಿ ಪಡೆದು ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ ಹೇಳಿದರು.
ಇಲ್ಲಿಯ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಬಗ್ಗೆ ಟೀಕಿಸುವ ಬಿಜೆಪಿ ಜಿಲ್ಲಾಧ್ಯಕ್ಷರು ಮೊದಲು ಜಾಲಿಹಾಳದ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿಲಿ, ಇಂತಹ ಸಂಕಷ್ಟದಲ್ಲಿ ರಾಜಕಾರಣದ ಟೀಕೆಗಳು ಸೂಕ್ತವಲ್ಲ. ಆರೋಪ ಮಾಡುವುದು ಸಮಂಜಸವಲ್ಲ. ಕೋವಿಡ್ ರೋಗಿಗಳಿಗೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಶಾಸಕರ ಬಗ್ಗೆ ಹೇಳಿರುವ ಹೇಳಿಕೆಯನ್ನ ಹಿಂದಕ್ಕೆ ಪಡೆಯಬೇಕು ಎಂದರು.
ಸ್ಥಳೀಯ ಸರಕಾರಿ ಆಸ್ಪತ್ರೆಗೆ ಅವಶ್ಯವಿರುವ ಆಕ್ಸಿಜೆನ್ ವ್ಯವಸ್ಥೆಯನ್ನು ಎರಡೆ ದಿನದಲ್ಲಿ ಬೇರೆಡೆಯಿಂದ ಪ್ರತಿದಿನ ೩೦ ಕೋವಿಡ್ ರೋಗಿಗಳಿಗೆ ಸರಬರಾಜು ಕಾರ್ಯ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಗಳ ರೋಗಿಗಳಿಗೆ ರೆಮಡಿಸಿವಿರ್ ಇಂಜೆಕ್ಷನ್ ಅವಶ್ಯವಿದ್ದಷ್ಟು ನೀಡಿರಿ ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಗುಣಮುಖರಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ. ಬಾದಾಮಿ, ಗುಳೇದಗುಡ್ಡ, ಕೆರೂರ ಕೋವಿಡ್ ರೋಗಿಗಳಿಗೆ ಉಚಿತ ಮೂರು ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ. ಇನ್ನೂ ಹೆಚ್ಚಿನ ಬೆಡ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣದ ಟೀಕೆಗಳು ಸಮಂಜಸವಲ್ಲ. ಜನರಿಗೆ ಸ್ಪಂದಿಸುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕ ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲರೂ ಹಗಲಿರುಳು ಸೇವೆ ಮಾಡುತ್ತಿದ್ದೇವೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಎಂ.ಬಿ.ಹAಗರಗಿ, ಪಿ.ಆರ್.ಗೌಡರ ಮಾತನಾಡಿ ಕೋವಿಡ್ ನಿರ್ವಹಣೆಗಾಗಿ ೨ ಗ್ರಾಮ ಪಂಚಾಯತ್ ಗೆ ಒಬ್ಬರಂತೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಕೋವಿಡ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನ ಅಂಗನವಾಡಿ ಆಶಾ ಕಾರ್ಯಕರ್ತಯರ ಮೂಲಕ ಕೋವಿಡ್ ಕೇರ್ ಸೆಂಟರ್‌ಗೆ ರವಾನಿಸುವ ಕೆಲಸ ನಡೆಯುತ್ತಿದೆ. ಚಿಕ್ಕಮುಚ್ಚಳಗುಡ್ಡ, ಜಾಲಿಹಾಳ, ಗುಳೇದಗುಡ್ಡ, ಕಗಲಗೊಂಬ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸಧ್ಯ ೧೫೦ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಪ್ರತಿದಿನ ಯೋಗ, ಪ್ರಾಣಾಯಾಮ ಅಭ್ಯಾಸ ನಡೆಸುವ ಮೂಲಕ ಆತ್ಮಸ್ಥೆರ್ಯ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದರು.

ಸಿಎಂ ಯಡಿಯೂರಪ್ಪನವರ ಕೋವಿಡ್ ಮೊದಲ ಅಲೆಯ ಪ್ಯಾಕೇಜೆ ಇನ್ನೂ ಸರಿಯಾಗಿ ತಲುಪಿಲ್ಲ. ಎರಡನೆ ಕೋವಿಡ್ ಅಲೆಯ ಘೋಷಣೆ ಮಾಡಿರುವ ಪ್ಯಾಕೇಜಿನಲ್ಲಿ ನೇಕಾರ, ಮೇದಾರ, ಹಡಪದ, ಮಡಿವಾಳ ಸೇರಿದಂತೆ ಕೆಳ ವರ್ಗದ ದಿನದ ಕೆಲಸಗಾರರನ್ನು ಕೈಬಿಡಲಾಗಿದೆ. ಅವರನ್ನೂ ಕೋವಿಡ್ ಪ್ಯಾಕೇಜಿನಲ್ಲಿ ಸೇರಿಸಬೇಕು ಇಲ್ಲವಾದರೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಹೊಳೆಬ ಸು ಶೆಟ್ಟರ್, ಎಂ. ಬಿ.ಹಂಗರಗಿ, ಪಿ.ಆರ್.ಗೌಡರ,ಆರ್.ಎಫ್.ಬಾಗವಾನ,ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, , ರಂಗು ಗೌಡರ,ರಂಗು ಗೌಡರ,ರವಿ ಯಡ್ರಾಮಿ, ಶಿವು ಮಣ್ಣೂರ ಉಪಸ್ಥಿತರಿದ್ದರು.

ವರದಿ: ರಾಜೇಶ್.ಎಸ್.ದೇಸಾಯಿ. ಬಾಗಲಕೋಟೆ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: