ಬಾದಾಮಿ: ಹೊಸೂರು ಗ್ರಾಮದ ಮಹಿಳೆಯರಿಂದ ಎಮ್. ಎಸ್. ಆಯ್ ಎಲ್. ಕಿತ್ತೊಗೆಯಲು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಮನವಿ. ಮನವಿಗೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿ.
ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಹಾಗೂ ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯ ನವರೂ ಎರಡು ದಿನಗಳ ತಮ್ಮ ಮತಕ್ಷೇತ್ರದ ಭೇಟಿಗಾಗಿ ಆಗಮಿಸಿದ್ದರು. ಮಂಗಳವಾರ ಬಾದಾಮಿಯಲ್ಲಿ ಒಂದು ಕಾರ್ಯಕ್ರಮ ಮುಗಿಸಿ ಮುಂದಿನ ಕಾರ್ಯಕ್ರಮಕ್ಕೆ ಹೊರಡುವ ಸಂದರ್ಭದಲ್ಲಿ ಬಾದಾಮಿಯ ತಾಲೂಕಿನ ಹೊಸೂರು ಗ್ರಾಮದ ಮಹಿಳೆಯರು ತಮ್ಮ ಗ್ರಾಮದಲ್ಲಿರುವ ಎಂ.ಎಸ್.ಐ.ಎಲ್. ಸಾರಾಯಿ ಅಂಗಡಿಯನ್ನು ತೆಗೆಸಬೇಕು ಇದರಿಂದ ನಮ್ಮ ಗ್ರಾಮದ ಕುಟುಂಬಗಳು ಹಾಳಾಗಿ ಹೋಗುತ್ತವೆ ಗ್ರಾಮದ ಹಿತಕ್ಕಾಗಿ ಈ ಸಾರಾಯಿ ಅಂಗಡಿ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಪ್ರಚಲಿತ ಆಡಳಿತಾ ರೂಢ ಪಕ್ಷ ಎಂ. ಎಸ್. ಐ. ಎಲ್. ಗೆ ಪರವಾನಿಗೆ ಕೊಟ್ಟಿದ್ದರೂ ತಮ್ಮ ಮತಕ್ಷೇತ್ರದ ನೊಂದ ಮಹಿಳೆಯರ ಆಕ್ರಂದನ ಕೇಳಿ ಸ್ಪಂದಿಸಿದ ಸಿದ್ದರಾಮಯ್ಯನವರು ಇದಕ್ಕೆ ಸಂಬAಧಪಟ್ಟAತೆ ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ತಮ್ಮ ಮತಕ್ಷೇತ್ರದ ಮಹಿಳೆಯರಿಗೆ ಭರವಸೆ ಮಾತುಗಳನ್ನ ಹೇಳಿ ಸಮಾಧಾನ ಪಡಿಸಿದರು. ಇಷ್ಟಾದರೂ ವಾಗ್ವಾದ ಮಾಡಿದ್ದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ನಂತರ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ ಸಾರ್ವಜನಿಕರನ್ನು ಚದುರಿಸಿ ಸಂಭಾಳಿಸಿ ಸಿದ್ದರಾಮಯ್ಯ ನವರನ್ನ ಮುಂದಿನ ಕಾರ್ಯಕ್ರಮಕ್ಕೇ ಕಳುಹಿಸಿಕೊಟ್ಟರು.
ವರದಿ:-ರಾಜೇಶ್.ಎಸ್.ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ