July 26, 2021

Bhavana Tv

Its Your Channel

ಮಿನಿ ವಿಧಾನಸೌಧ ನಿರ್ಮಾಣಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ ಹುಬ್ಬಳ್ಳಿಯವರ ತಂಡ ಸ್ಥಳ ಪರಿಶೀಲನೆ

ಬಾದಾಮಿ: ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಪ್ರಯತ್ನದ ಫಲಶ್ರುತಿಯಾಗಿ ಗುಳೇದಗುಡ್ಡದಲ್ಲಿ ಇಂದು ಮಿನಿ ವಿಧಾನಸೌಧ ನಿರ್ಮಾಣಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ ಹುಬ್ಬಳ್ಳಿ ಇವರುಗಳ ತಂಡ ಬಂದು ಸ್ಥಳ ಪರಿಶೀಲನೆ ನಡೆಸಲಾಯಿತು.

ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಹಾಗೂ ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರು ಈ ಹಿಂದೆ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ ಹುಬ್ಬಳ್ಳಿ ಭಾರತಿಯವರಿಗೆ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತನಾಡಿದ ಹಿನ್ನೆಲೆಯಲ್ಲಿ ನೂತನ ಗುಳೇದಗುಡ್ಡ ತಾಲ್ಲೂಕಿನ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹೆಸ್ಕಾಂ ಉಪ ವಿಭಾಗದ ಕಛೇರಿ ಜಾಗೆಯನ್ನು ಹಸ್ತಾಂತರಿಸಲು ಕೋರಿದ್ದರು,, ಅದರಂತೆ ಇಂದು ಗುಳೇದಗುಡ್ಡ ನಗರಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ ಹುಬ್ಬಳ್ಳಿ ಇವರ ತಂಡದವರು ಬಂದು ಸ್ಥಳ ಪರಿಶೀಲನೆ ನಡೆಸಿದರು ,
ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಬದಾಮಿ ಕ್ಷೇತ್ರದ ಶಾಸಕರೂ ಆದ ಮಾನ್ಯ ಶ್ರೀ ಸಿದ್ದರಾಮಯ್ಯ ಚರ್ಚಿಸಿ ಕೂಡಲೇ ನಿರ್ಧಾರ ಮಾಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು ಎಂದು ಯುವ ಮುಖಂಡರಾದ ಹೊಳಬಸು ಶೆಟ್ಟರ ಈ ಸಂದರ್ಭದಲ್ಲಿ ತಿಳಿಸಿದರು.

ರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: