December 19, 2024

Bhavana Tv

Its Your Channel

ಸಣ್ಣ ನೀರಾವರಿ ಹಾಗೂ ಜಿ.ಪಂ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿ ಪೈಪಲೈನ್ ಮುಖಾಂತರ ನೀರು ತುಂಬಿಸುವ ಯೋಜನೆ.

ಬಾದಾಮಿ: ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಬಾದಾಮಿ ಮತಕ್ಷೇತ್ರದ ಶಾಸಕರೂ ಆದ ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರದ ಕೋಟೆಕಲ್ಲ, ಕೆಲವಡಿ, ತಿಮ್ಮಸಾಗರ, ತೊಗುಣಶಿ , ತೊಗುಣಶಿ ತಾಂಡಾ, ಹಿರೇಬೂದಿಹಾಳ, ತೆಗ್ಗಿ, ಹಂಸನೂರ, ಹಂಗರಗಿ, ಲಿಂಗಾಪುರ,ಶಿರೂರ( ನೀಲಾನಗರ) ಗ್ರಾಮಗಳ ಒಟ್ಟು ೧೩ ಸಣ್ಣ ನೀರಾವರಿ ಹಾಗೂ ಜಿ.ಪಂ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಮಹಾರುದ್ರಪ್ಪನ ಹಳ್ಳದ) ( ಘಟಪ್ರಭಾ ನದಿಯಿಂದ) ಪೈಪಲೈನ್ ಮುಖಾಂತರ ನೀರು ತುಂಬಿಸುವ ಯೋಜನೆಯ ಕ್ರಿಯಾ ಯೋಜನೆಗೆ ಇಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಕೃಷ್ಣಾ ಭಾಗ್ಯ ಜಲ ನಿಗಮದ ೧೩೦ ನೇ ಬೋರ್ಡ್ ಸಭೆಯಲ್ಲಿ ೮೨ ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು ಅತ್ಯಂತ ಸಂತೋಷದ ವಿಷಯ ಈ ಭಾಗದ ಕೆರೆಗೆ ನೀರು ತುಂಬಿಸುವುದರಿAದ ಜನ ಜಾನುವಾರುಗಳ, ರೈತರಿಗೆ ಬಹಳ ಅನುಕೂಲಕರ ವಾಗಲಿದೆ ಎಂದು ಯುವ ಮುಖಂಡ ಹೊಳಬಸು ಶೆಟ್ಟರ ತಿಳಿಸಿದರು , ಈ ಸಂದರ್ಭದಲ್ಲಿ ಅನುಮೋದನೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ವಿರೋಧ ಪಕ್ಷದ ನಾಯಕರು, ಬಾದಾಮಿ ಮತಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನ ತಿಳಿಸಿದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: