ಬಾದಾಮಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ ಬಾದಾಮಿ ಗಣೇಶ ಚತುರ್ಥಿ ಅಂಗವಾಗಿ ಯುವ ಸಾಹಿತಿಯಾದ ಸದಾಶಿವ ಎಂ. ಮರಡಿ ಇವರ ಮನಸ್ಸಿನಂತೆ ಮಹಾದೇವ ಬ್ರಹ್ಮಾಂಡ ಮುಚ್ಚಿದ ಕೆಂಡ ಐದನೇ ಕವನ ಸಂಕಲನ ಇಂದು ಬಾದಾಮಿಯಲ್ಲಿ ಲೋಕಾರ್ಪಣೆಗೊಂಡಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ ಬಾದಾಮಿ. ಸದಾಶಿವ ಮರಡಿ ರವರ ಮನಸ್ಸಿನಂತೆ ಮಹಾದೇವ. ಬ್ರಹ್ಮಾಂಡ ಮುಚ್ಚಿದ ಕೆಂಡ ೫ ನೇ ಕವನ ಸಂಕಲನ ಲೋಕಾರ್ಪಣೆ ಸಮಾರಂಭದ ಸಾನಿಧ್ಯವನ್ನು ಶ್ರೀ ಷ.ಬ್ರ. ಶ್ರೀ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ನವಗ್ರಹ ಹಿರೇಮಠ ಬಾದಾಮಿ, ಅಧ್ಯಕ್ಷತೆಯನ್ನು ರೇವಣಸಿದ್ದಪ್ಪ ವೈದ್ಯಾಧಿಕಾರಿಗಳು ಬಾದಾಮಿ, ಉದ್ಘಾಟನೆ ಬಸಮ್ಮ ನರಸಾಪುರ ಶಿಕ್ಷಕಿಯರು ಬಾದಾಮಿ, ಕೃತಿ ಬಿಡುಗಡೆ ಮಲ್ಲಿಕಾರ್ಜುನ ಬ ಪಾಟೀಲ ತಾಲೂಕಾ ವೈದ್ಯಾಧಿಕಾರಿಗಳು ಬಾದಾಮಿ, ಕೃತಿ ಅವಲೋಕನ. ಡಾ. ರಾಜಶೇಖರ ಬಸುಪಟ್ಟದ, ಮುಖ್ಯ ಅತಿಥಿಗಳಾಗಿ, ಸಂದೀಪ ಬೆಳಗಲಿ, ಸಿಂಡಿಕೇಟ್ ಸದಸ್ಯರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಜಮಖಂಡಿ, ಶ್ರೀ ಮೆಹಬೂಬ್ ಗಡಾದ ಹೋಟೆಲ್ ಉದ್ಯಮಿಗಳು ಬಾದಾಮಿ, ಡಾ. ಆರ್ ಸಿ ಭಂಡಾರಿ ವೈದ್ಯರು ಬಾದಾಮಿ, ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಆರ್ ವಾಯ್ ಪಾಟೀಲ ಶಿಕ್ಷಕಿಯರು ಬಾದಾಮಿ, ಪ್ರಾರ್ಥನೆ, ಪವಿತ್ರ ಜಕ್ಕಪ್ಪನವರಿಂದ ಹಾಗೂ ಜಯಶ್ರೀ ಆಲೂರು ಅವರಿಂದ, ಸ್ವಾಗತ ಹಾಗೂ ಮಾಲಾರ್ಪಣೆ, ಶಿವಾನಂದ ಪರಸಣ್ಣವರ ಶಿಕ್ಷಕ ಸಾಹಿತಿಗಳು ಬಾದಾಮಿ, ವಂದನಾರ್ಪಣೆ ರಮೇಶ್ ಕತ್ತಿಕೈ ಮಾಡಿದರು. ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ವಿಕಲಚೇತನ ಕಬಡ್ಡಿ ಕ್ರೀಡಾಪಟು ಸಿದ್ದಾರೂಢ ಕೊಪ್ಪದ, ಬಾಲ ಕಲಾ ಪ್ರತಿಭೆಗಳನ್ನು ಹಾಗೂ ಕೊರೋನಾ ವಾರಿಯರ್ ವೈದ್ಯ ಡಾ. ಹೂವಪ್ಪ ಗಾಣಿಗೇರ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರೇವಣಸಿದ್ದಪ್ಪ ಮುಖ್ಯ ವೈದ್ಯಾಧಿಕಾರಿಗಳು ತಾಲೂಕಾ ಆಸ್ಪತ್ರೆ ಬಾದಾಮಿ. ಇವರು ವಹಿಸಿದ್ದರು.
ಬಸಮ್ಮ ನರಸಾಪೂರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜೇತ ಶಿಕ್ಷಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಸಂದರ್ಭದ ವರ್ತಮಾನ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕವಿಯೆಂದರೆ ತಪ್ಪಾಗಲಿಕ್ಕಿಲ್ಲ ಎಂದು ತಿಳಿಸಿದರು.
ಬ್ರಹ್ಮಾಂಡ ಮುಚ್ಚಿದ ಕೆಂಡ ಕವನ ಸಂಕಲನವನ್ನು ಡಾ. ಮಲ್ಲಿಕಾರ್ಜುನ ಬಿ. ಪಾಟೀಲ ತಾಲೂಕಾ ವೈದ್ಯಾಧಿಕಾರಿಗಳು ಮುಂದಿನ ದಿನಮಾನಗಳಲ್ಲಿ ಸದಾಶಿವ ಮರಡಿರವರು ಬಹುದೊಡ್ಡ ಸಾಹಿತಿಗಳಾಗಿ ಹೊರಹೊಮ್ಮುತ್ತಾರೆಂದು ಕೃತಿ ಲೋಕಾರ್ಪಣೆ ಮಾಡಿ ತಿಳಿಸಿದರು.
ಸಮಾಜದ ಮತ್ತು ಬ್ರಹ್ಮಾಂಡದ ಎಲ್ಲ ಸ್ತರಗಳ ನೋವು ನಲಿವು, ಪ್ರೀತಿ, ನಾಡು ನುಡಿ, ಜಲ, ಭಾಷೆ ಮತ್ತು ಅಸ್ಮಿತೆಯ ಬಗ್ಗೆ ಅದ್ಬುತವಾಗಿ ಬರೆದಿದ್ದಾರೆಂದು ಡಾ. ರಾಜಶೇಖರ ಬಸುಪಟ್ಟದ ಖ್ಯಾತ ಸಾಹಿತಿಗಳು ಕೃತಿ ಅವಲೋಕನ ಮಾಡುತ್ತ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಕವನ ಸಂಕಲನದಲ್ಲಿರುವ ಅತ್ತಿದ್ದು ಸಾಕು ಕವನದ ಗೂಡಾರ್ಥವನ್ನು . ಹಾಗೂ ಸದಾಶಿವ ರವರ ಕೃತಿ ಬಹಳಷ್ಟು ಚೆನ್ನಾಗಿ ಮೂಡಿಬಂದಿದೆ. ಸಾಹಿತ್ಯ ಎಲ್ಲರಲ್ಲೂ ಬರೋದಿಲ್ಲ. ಆದರೆ ಇಂಥಹ ಬಾದಾಮಿ ನೆಲಸಂಸ್ಕೃತಿಯ ನಾಡಲ್ಲಿ ಪ್ರತಿಭಾನ್ವಿತ ಹಾಗೂ ಸೃಜನಶೀಲ ಕವಿ ಇರುವುದು ಬಾದಾಮಿಗೊಂದು ಹೆಮ್ಮೆಯ ವಿಷಯವೆಂದು ಆಶಿರ್ವಚನದಲ್ಲಿ ಷ. ಬ್ರ. ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಜಿ. ನವಗ್ರಹ ಹಿರೇಮಠ ಹೇಳಿದರು.
ಈ ಸಂದರ್ಭದಲ್ಲಿ ಸಂದಿಪ ಬೆಳಗಲಿ ಸಿಂಡಿಕೇಟ್ ಸದಸ್ಯರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಮತ್ತು ಗೋಲ್ಡನ್ ಕೇವ್ಸ ಮಾಲಿಕರಾದ ಮೆಹಬೂಬ ಗಡಾದ ಇವರು ಭಾಗವಹಿಸಿದ್ದರು.
ಬಾದಾಮಿ ತಾಲೂಕಿನ ಎಲ್ಲ ಸಾಹಿತ್ಯ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ.
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ