September 27, 2021

Bhavana Tv

Its Your Channel

ಪಂಚಮಸಾಲಿಗಳಿಗೆ ೨ಎ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂದು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಕೆ

ಬಾದಾಮಿ: ಪಂಚಮಸಾಲಿಗಳಿಗೆ ೨ಎ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂದು ಬಾದಾಮಿಯ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

೨೦೨೧ ಸೆಪ್ಟೆಂಬರ ೧೫ರ ಒಳಗಾಗಿ ಪಂಚಮಸಾಲಿಗಳಿಗೆ ೨ಎ ಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನ ಸೌಧದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆಯಲಿ ಎಂದು ನೆನಪಿಸಲು ಹಕ್ಕೊತ್ತಾಯ ಮನವಿಯನ್ನು ಎಂ.ಡಿ ಯಲಿಗಾರ, ಬಸು ದೂಳಪ್ಪನವರ, ಸಿದ್ದು ಗುಡಗುಡಿ, ರಮೇಶ ಹಾದಿಮನಿ, ಬಸವರಾಜ್ ಉಳ್ಳಾಗಡ್ಡಿ, ಪ್ರವೀಣ ಹೋಳಿ, ಪ್ರದೀಪ ತೋಟರ, ಪ್ರಕಾಶ ನರಗುಂದ, ಬಸವರಾಜ್ ಧರ್ಮನ್ನವರ ಸೇರಿದಂತೆ ಬಾದಾಮಿ ತಾಲೂಕ ಪಂಚಮಸಾಲಿ ಘಟಕದಿಂದ ತಹಶೀಲ್ದಾರರಿಗೆ ನೀಡಲಾಯಿತು

ನಗರದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕ ಪಂಚಮಸಾಲಿ ಸಮಾಜದಿಂದ ಉಪತಹಶೀಲ್ದಾರ ಬೊಮ್ಮನವರಿಗೆ ಮನವಿ ಸಲ್ಲಿಸಿ ಎಂ.ಡಿ ಯಲಿಗಾರ ಮಾತನಾಡಿ ಲಿಂಗಾಯತ ಪಂಚಮಸಾಲಿ ಹಾಗೂ ಉಪನಶಾಮಗಳಾದ ಗೌಡ ಲಿಂಗಾಯತ, ಮಲೆ ಗೌಡ ದೀಕ್ಷಾ ಪಂಚಮ ಸಾಲಿಗಳಿಗೆ ೨೧ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನ ಆಡಳಿತ ಪೀಠದವರೆಗೆ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಜಿಯವರ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯ ಪಾದಯಾತೆ, ಜಗತ್ತಿಗೆ ಪಂಚಮಸಾಲಿಗಳನ್ನು ಪ್ರಥಮ ಬಾರಿಗೆ ಶಕ್ತಿ ಪ್ರದರ್ಶನ ಮೂಲಕ ಪರಿಚಯಸುವ ಬೆಂಗಳೂರಿನ ಮಹಾ ರಾಲಿ ಹಾಗೂ ೨೩ ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಮೇಲೆ, ವಿಜಯಪೂರ ಶಾಸಕ ಬಸವನಗೌಡ ಪಾಟೀಲ ಯತ್ನಾಳರವರು ಸದನದ ಒಳಗೆ ನಿರಂತರ ಹಕ್ಕೊತ್ತಾಯ ಮಾಡಿದ ಪರಿಣಾಮ ಮಾಸನ್ಯ ಮುಖ್ಯಮಂತ್ರಿಗಳು ಮಾರ್ಚ ೧೫ ರಂದು ಆರು ತಿಂಗಳೊಳಗೆ ಅಂದರೆ ಸೆಪ್ಟೆಂಬರ ೧೫ರ ಒಳಗಡೆಯಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇವೆ ಎಂದು ಅಧಿವೇಶನದಲ್ಲಿ ಕೊಟ್ಟ ಮಾತು ಕಡತಗಳಲ್ಲಿ ದಾಖಲಾಗಿದೆ. ಸರ್ಕಾರ ಕೇಳಿದ ಕಾಲಾವಕಾಶ ಸೆಪ್ಟೆಂಬರ ೧೫ ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿಗಳು ಮೀಸಲಾತಿಯನ್ನು ನೀಡಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡುತ್ತೆವೆ.ಒಂದು ವೇಳೆ ವಿಳಂಬವಾದಲ್ಲಿ ಆಕ್ಟೋಬರ ೧ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಜಗದ್ಗುರುಗಳ ಸಾನಿಧ್ಯದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸುತ್ತವೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: