October 20, 2021

Bhavana Tv

Its Your Channel

ಬಾದಾಮಿಯಲ್ಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ ಗುದ್ದಲಿ ಪೂಜೆ

ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ, ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಹಾಗೂ ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಬಾದಾಮಿಯಲ್ಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ ಗುದ್ದಲಿ ಪೂಜೆ ನೇರವೇರಿಸಿದರು.

ಬಾಗಲಕೋಟೆ ಜಿಲ್ಲೆಯ ಅಂತಾರಾಷ್ಟ್ರೀಯ ಪ್ರವಾಸಿ ತಾಣ ಚಾಲುಕ್ಯರ ನಾಡು ಬಾದಾಮಿಯಲ್ಲಿ ಇಂದುಪ್ರವಾಸೋಧ್ಯಮ ಇಲಾಖೆ ಸಹಯೋಗದೊಂದಿಗೆ ಹತ್ತಿರದ ಸುಕ್ಷೇತ್ರ ನವಶಕ್ತಿ ಶಕ್ತಿ ಪೀಠಗಳಲ್ಲಿ ಒಂದಾದ ಆದಿಶಕ್ತಿ ಶ್ರೀ ಬನಶಂಕರಿ ದೇವಿಯ ದರ್ಶನ ಪಡೆದುಕೊಂಡು ಸಾಗಿದ ನಾಯಕರು ಇಂದು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಬಾಗಲಕೋಟೆ ರವರ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಡಿಯಲ್ಲಿ ಬಾದಾಮಿ ತಾಲೂಕ ಚೋಳಚಗುಡ್ಡ ಗ್ರಾಮದ ಹತ್ತಿರದ ಸುಕ್ಷೇತ್ರ ಬನಶಂಕರಿ ಯಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭವನ್ನ ಶ್ರೀ ಸಿದ್ದರಾಮಯ್ಯ ನವರು ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ ಸಿಂಗ್ ಅವರು ನೇರವೇರಿಸಿದರು..


ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಬಾದಾಮಿ ಮತಕ್ಷೇತ್ರದ ಶಾಸಕ ಶ್ರಿ ಸಿದ್ದರಾಮಯ್ಯನವರು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಬಾದಾಮಿಗೆ ಸ್ಥಳಾಂತರಿಸಲು ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅನುದಾನವನ್ನು ಮಂಜೂರು ಮಾಡಲು ಮಾನ್ಯ ಸಚಿವರಾದ ಶ್ರೀ ಆನಂದಸಿoಗ ರವರಿಗೆ ಕೋರಿ ಪತ್ರ ಬರೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದ ಪಿ. ಸಿ.ಗದ್ದಿಗೌಡರ್, ವಿಧಾಪರಿಷತ್ ವಿರೋಧ ಪಕ್ಷದ ನಾಯಕರು ಶ್ರೀ ಎಸ್ ಆರ್ ಪಾಟೀಲ್ ಮತ್ತು ಬಾಗಲಕೋಟ ಲೋಕಸಭಾ ಸಂಸದರು ಶ್ರೀ ಪಿ ಸಿ ಗದ್ದಿಗೌಡ್ರ ಮತ್ತು ವಿಧಾನಪರಿಷತ್ ಸದಸ್ಯರು ಶ್ರೀ ಸುನಿಲಗೌಡ ಪಾಟೀಲ್ ಮತ್ತು ಜಿಲ್ಲಾಧಿಕಾರಿಗಳು ತಾಲೂಕ ಅಧಿಕಾರಿಗಳು, ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಗ್ರಾಮದ ಜನತೆ ಕೂಡ ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್. ದೇಸಾಯಿ ಬಾದಾಮಿ

error: