December 21, 2024

Bhavana Tv

Its Your Channel

ಅಕಾಲಿಕ ಮರಣ ಹೊಂದಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜುಗಲಕಿಶೋರ ಬಟ್ಟಡರವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚನೆ

ಬಾಗಲಕೋಟ: ಗುಳೇದಗುಡ್ಡ ಭಾಗದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸರಳ,ಸಜ್ಜನಿಕೆ ವ್ಯಕ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿ,ಮಾಹೇಶ್ವರಿ ಸಮಾಜದ ಹಿರಿಯರಾದ ಜುಗಲಕಿಶೋರ ಬಟ್ಟಡರವರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿ ನಂತರ ಮಾತನಾಡಿ ಮರಣದ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು, ಇವರು ಇತ್ತೀಚೆಗೆ ಮಾಹೇಶ್ವರಿ ಸಮಾಜವನ್ನು ಜಾತಿ ಪಟ್ಟಿಗೆ ಸೇರಿಸುವ ಬಗ್ಗೆ ಅವರ ಸಮಾಜದ ನಿಯೋಗದೊಂದಿಗೆ ನನ್ನ ಬೆಂಗಳೂರು ನಿವಾಸದಲ್ಲಿ ಭೇಟಿಯಾಗಿದ್ದರು ಅದೆ ಅವರ ನಮ್ಮ ಕೊನೆಯ ಬೇಟಿಯಾಗಿತ್ತು ಅವರು ನನ್ನ ಜೊತೆಗೆ ಒಳ್ಳೆಯ ಸಂಪರ್ಕ ಇಟ್ಟಿದ್ದರು ಇವರಿಂದ ಆ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹಾಗೂ ಹಲವಾರು ಸಂಘ ಸಂಸ್ಥೆಗಳಿಗೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಬಂಧು ಮಿತ್ರರಿಗೆ, ಅಪ್ತರಿಗೆ ಕರುಣಿಸಲಿ ಎಂದು ಈ ಸಂದಭ್ದಲ್ಲಿ ಪ್ರಾರ್ಥಿಸಿದರು.

ವರದಿ:- ರಾಜೇಶ್.ಎಸ್. ದೇಸಾಯಿ ಬಾದಾಮಿ

error: