December 20, 2024

Bhavana Tv

Its Your Channel

ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಪರ ಪ್ರಚಾರ ಸಭೆ

ಬಾದಾಮಿ :ಇಂದು ಬಾದಾಮಿಯಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಯುಕ್ತ ವಿಧಾಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸುನಿಲಗೌಡ ಪಾಟೀಲ್ ಪರ ಪ್ರಚಾರ ಸಭೆ ನಡೆಸಲಾಯಿತು.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಹಸಿರು ಸಸ್ಯಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯನವರು ಅಭ್ಯರ್ಥಿ ಸುನೀಲ ಗೌಡ ಪಾಟೀಲ ಪರ ಬಿರುಸಿನ ಪ್ರಚಾರ ಮಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪುರಸಭೆ ಸದಸ್ಯರು ಪಟ್ಟಣ ಪಂಚಾಯಿತಿಯ ಸದಸ್ಯರು, ವಿಧಾಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ *ಶ್ರೀಯುತ ಸುನಿಲಗೌಡ ಪಾಟೀಲ್ , ವಿರೋಧ ಪಕ್ಷದ ನಾಯಕರು ಬಾದಾಮಿ ಮತ ಕ್ಷೇತ್ರದ ಜನಪ್ರಿಯ ಶಾಸಕರು ಸಿದ್ದರಾಮಯ್ಯನವರು ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಸಚಿವರಾದ ಎಂಬಿ ಪಾಟೀಲ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ,ಮಾಜಿ ಸಚಿವರು ಆರ್ ಬಿ ತೀಮ್ಮಾಪೂರ, ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ , ಬಿಜಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜು ಅಲಗೂರು, ಬಾದಾಮಿ ಮತ ಕ್ಷೇತ್ರದ ಯುವ ನಾಯಕರಾದ ಶ್ರೀ ಭೀಮಸೇನ ಬಿ.ಚಿಮ್ಮನಕಟ್ಟಿ, ಮಹೇಶ ಎಸ್ ಹೊಸಗೌಡ್ರ , ಬಾದಾಮಿ ಬ್ಲಾಕ್ ಅಧ್ಯಕ್ಷರಾದ ಎಮ್ ಡಿ ಯಲಿಗಾರ, ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷರಾದ ರಾಜು ಜವಳಿ, ಎಮ್ ಎಚ್ ಚಲವಾದಿ, ಹೊಳಬಸು ಶೆಟ್ಟರ, ಬಾಗಲಕೋಟ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷೀತಾ ಈಟಿ ,ಬಾದಾಮಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶೈಲಾ ಪಾಟೀಲ , ಡಾ.ಎಮ್ ಜಿ ಕೀತ್ತಲಿ ಎಸ್ ವಾಯ್ ಕುಳಗೇರಿ,ಬಾದಾಮಿ ಮತ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಗ್ರಾಮ ಪಂಚಾಯತಿ ಸದಸ್ಯರು ಪುರಸಭೆ ಸದಸ್ಯರು ಪಟ್ಟಣ ಪಂಚಾಯತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: