April 16, 2025

Bhavana Tv

Its Your Channel

ಕ್ಷಯ ರೋಗದ ಜಾಗೃತಿ ಕುರಿತು ಬೀದಿ ನಾಟಕ

ಬಾಗಲಕೋಟೆ:- ಕರ್ನಾಟಕ ಹೆಲ್ತ ಪ್ರಮೊಷನ್ ಟ್ರಸ್ಟ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಸಹಯೋಗದೊಂದಿಗೆ ಕ್ಷಯ ರೋಗದ ಬಗ್ಗೆ ಜಾಗೃತಿಗಾಗಿ ಬೀದಿ ನಾಟಕ ಹಮ್ಮಿಕೊಳ್ಳ ಲಾಗಿತ್ತು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ದಲ್ಲಿ ಕ್ಷಯ ರೋಗದ ಕುರಿತು ಕರ್ನಾಟಕ ಹೆಲ್ತ ಪ್ರಮೊಷನ್ ಟ್ರಸ್ಟ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಸಹಯೋಗದೊಂದಿಗೆ ಬೀದಿ ನಾಟಕ ಹಮ್ಮಿಕೊಂಡು, ನಾಟಕದ ಮುಖಾಂತರ ಜನರಿಗೆ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸಲಾಯಿತು. ಚೋಳಚಗುಡ್ಡ ಗ್ರಾಮ ಪಂಚಾಯತಿ ಎದುರಿಗೆ ಬೀದಿ ನಾಟಕ ಹಮ್ಮಿಕೊಳ್ಳಲಾಯಿತು ಇದರಲ್ಲಿ ಕೆ.ಎಚ. ಪಿ. ಟಿ. ಸಿಬ್ಬಂದಿ ಹಾಗೂ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗ,, ಬೇಲೂರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಹಾಗೂ ಜಾನಪದ ಕಲಾತಂಡದವರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: