December 21, 2024

Bhavana Tv

Its Your Channel

ಶಾಕಂಭರೀ ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡದ ಶ್ರೀ ಶಾಕಂಭರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯವರು ವಾರ್ಷಿಕ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದರು. ಇಡೀ ಕಾರ್ಯಕ್ರಮದ ವಿಶಿಷ್ಟತೆ ಏನೆಂದರೆ ಕಾರ್ಯಕ್ರಮದ ಅತಿಥಿಗಳ ಸ್ವಾಗತ ಮಾಡಿದ ಸಮೂಹ ಭರತನಾಟ್ಯ ನೃತ್ಯ, ಬಾಲಿವುಡ್ ನಲ್ಲಿನ ಚಿತ್ರ ಗೀತೆಯನ್ನು ಭರತನಾಟ್ಯ ದ ನೃತ್ಯಕ್ಕೆ ಅದನ್ನು ಪರಿವರ್ತಿಸಿ ವಿಧ್ಯಾರ್ಥಿಗಳಿಗೆ ನೃತ್ಯ ವನ್ನೂ ಕಲಿಸಿ ಕೊರಿಯೋಗ್ರಾಫಿ ಮಾಡಿದ ಬಿ.ಸುನೀಲ್ ಅವರ ನಿರ್ದೇಶನ ಇಡೀ ಕಾರ್ಯಕ್ರಮದ ಅಚ್ಚುಮೆಚ್ಚು ಆಗಿತ್ತು. ಎಲ್ಲರೂ ಮೈ ಮರೆಯುವ ಅದ್ಭುತ ಭರತನಾಟ್ಯದ ಭಂಗಿಗಳು ಮನಸೂರೆಗೊಳ್ಳುವ ಹಾಗೆ ಇತ್ತು. ಇದರಂತೆ ವಾರ್ಷಿಕ ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸುವ ಕಾರ್ಯ ನಡೆಯಿತು. ಒಟ್ಟಾರೆಯಾಗಿ ವಾರ್ಷಿಕ ಕ್ರೀಡಾಕೂಟ ಈ ವಿಶಿಷ್ಟ ಭರತನಾಟ್ಯದ ನೃತ್ಯದಿಂದ ವಿಶೇಷ ಮೆರಗು ತಂದು ಕೊಟ್ಟಿತ್ತು. ಈ ಕಾರ್ಯಕ್ರಮ ವನ್ನ
ಕುಮಾರಿ. ಜಾಸ್ಮಿನ್ ಹೊಸಮನಿ ಶಿಕ್ಷಕಿ ನಿರೂಪಿಸಿದರು. ಶಿಲ್ಪಾ ವಂದನಾರ್ಪನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಡಿ ಆರ್. ಬಸವರಾಜ್ ಮೂಲ್ಕಿಪಾಟೀಲ್ , ನವಚೇತನ ಎಜುಕೇಶನ್ ಸೊಸೈಟಿ ಅಧ್ಯಕ್ಷರು ಎಂ. ಆರ್. ಸಂಗನಗೌಡ ಬಿರಾದಾರ್, ನಾಗರಾಜ್ ಬಾವಿ.
ಎಂ. ಆರ್. ಸಂತೋಷ್ ಚನಾಲಿಕ್ಕರ್, ಆರ್ ಎಸ್. ಮುಕ್ತಾಬಾಯಿ ಕುಲಕರ್ಣಿ,
ಆರ್. ರಮೇಶ್ ಶಹಬಾದ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: