ಬಾದಾಮಿ:– ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶೀತಲ್ ಚಿತ್ರಮಂದಿರದಲ್ಲಿ ಬಹು ನಿರೀಕ್ಷಿತ ಸಂಚಲನ ಮೂಡಿಸಿರುವ “ದಿ ಕಾಶ್ಮೀರ್ ಫೈಲ್ಸ್ “ಚಲನಚಿತ್ರಕ್ಕೆ ಬಾದಾಮಿ ನಗರದ ಹಿಂದೂ ಸಂಘಟನೆಯವರು ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಶ್ಲೋಕ ಹೇಳಿ ಒಂದೇ ಮಾತರಂ ಘೋಷಣೆ ಕೂಗಿದರು. ಈ ಚಲನಚಿತ್ರ ಕಾಶ್ಮೀರದಲ್ಲಿರುವ ಹಿಂದೂ ಪಂಡಿತರ ಮೇಲಿನ ದೌರ್ಜನ್ಯ ಕೊಲೆ ಸುಲಿಗೆ ಎಲ್ಲವನ್ನೂ ನೈಜ ಎನ್ನುವ ರೀತಿ ಚಿತ್ರೀಕರಿಸಿದ್ದು ಹಿಂದೂಗಳ ಮೇಲೆ ಆಗಿರುವ ದೌರ್ಜನ್ಯ ತಿಳಿಯಲು ಈ ಚಲನಚಿತ್ರವನ್ನು ಪ್ರತಿಯೊಬ್ಬ ಹಿಂದೂ ನೋಡಲೇಬೇಕು ಎಂದು ಹಿಂದೂ ಸಂಘಟನೆಯ ಮುಖಂಡರು ಇದೇ ಸಂದರ್ಭದಲ್ಲಿ ನಮ್ಮ ಮಾಧ್ಯಮದ ಎದುರು ಮನವಿ ಮಾಡಿದರು.
ಈ ಚಿತ್ರಕ್ಕೆ ಪ್ರಧಾನಿ ಮೋದಿಯವರು ಕೂಡ ಪ್ರಶಂಸೆ ವ್ಯಕ್ತಪಡಿಸಿ ಕಾಶ್ಮೀರದಿಂದ ಪಾಲಾಯನಗೈದಿರುವ ಹಿಂದೂ ಪಂಡಿತರಿಗೆ ಕಾಶ್ಮೀರಿ ರಹವಾಸಿ ಪ್ರಮಾಣಪತ್ರ ಕೊಟ್ಟು ಇಲ್ಲಿಯೇ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು ಎಂದು ಘೋಷಿಸಿದ್ದಾರೆ ಎಂದು ಇದು ಈ ಚಿತ್ರದ ಅಗಾಧ ಪ್ರಭಾವ ಎನ್ನಬಹುದು.ಹಿಂದೂ ಸಂಘಟನೆಯ ಇನ್ನೂ ಕೆಲವು ಮುಖಂಡರು ನಮ್ಮ ಮಾಧ್ಯಮದ ಎದುರು ಚಲನಚಿತ್ರದ ಬಗ್ಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊAಡರು. ಸೋಮವಾರದಿಂದ ತಾಲೂಕಿನ ರಾಷ್ಟ್ರ ಭಕ್ತರು ತಾಲೂಕಿನ ಮುಖಂಡರು ಸೇರಿ ಚಲನಚಿತ್ರವನ್ನು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲು ತಾಲೂಕಿನ ಮುಖಂಡರಲ್ಲಿ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಹಾಗೂ ದೇಶಭಕ್ತರು ಭಾಗವಹಿಸಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ