May 4, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಬೆಂಗಳೂರು : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊಬೈಲ್ ಅಪ್ಲಿಕೇಶನ್ ನ್ನು ಲೋಕಾರ್ಪಣೆಗೊಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊಸದಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಅಸ್ತಿತ್ವಕ್ಕೆ ಬಂದಿದ್ದು, ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅವಶ್ಯ ಮಾಹಿತಿ ಇದರಲ್ಲಿ ದೊರೆಯುವ ಜೊತೆಗೆ ಆಜೀವ ಸದಸ್ಯತ್ವವನ್ನೂ ಕೂಡಾ ಇದರ ಮೂಲಕವೇ ಮಾಡಿಕೊಳ್ಳಬಹುದಾಗಿದೆ ಎಂದು ಉತ್ತರ ಕನ್ನಡದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕಸಾಪ ರಾಜ್ಯಾದ್ಯಕ್ಷ ನಾಡೋಜ ಮಹೇಶ ಜೋಷಿಯವರು ಒಂದು ಕೋಟಿ ಕಸಾಪ ಆಜೀವ ಸದಸ್ಯತ್ವ ಮಾಡುವ ಮಹತ್ವಾಕಾಂಕ್ಷೆಯ ಗುರಿಯಿಟ್ಟಿಕೊಂಡಿದ್ದಾರೆ. ಅದಕ್ಕಾಗಿಯೇ ಈ (ಆ್ಯಪ್) ಮಾಡಲಾಗಿದೆ. ಇದರಲ್ಲಿ ಕಸಾಪದ ಅವಶ್ಯ ಮಾಹಿತಿಗಳು ಸಿಗಲಿವೆ. ಹಾಗೂ ಹೊಸದಾಗಿ ಕಸಾಪ ಆಜೀವ ಸದಸ್ಯರಾಗುವವರೂ ಕೂಡಾ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆಮೂಲಕವೇ ಅವಶ್ಯ ಮಾಹಿತಿ ಭರ್ತಿ ಮಾಡಿ ಸದಸ್ಯರಾಗಬಹುದಾದ ವ್ಯವಸ್ಥೆಯಿದೆ. ಈ ಮೊದಲು ಸದಸ್ಯರಾಗಿದ್ದವರೂ ಕೂಡಾ ತಮ್ಮ ಹೆಸರಿನ ತಿದ್ದುಪಡಿ, ವಿಳಾಸ ಬದಾಲವಣೆಗಳಿದ್ದರೂ ಮಾಡಿಕೊಳ್ಳಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡಾ ಕಸಾಪ ಆಜೀವ ಸದಸ್ಯರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದ ಅವಶ್ಯಕತೆಯಿದೆ. ಹಾಗಾಗಿ ಈ ಆ್ಯಪ್ https://play.google.com/store/apps/details?id=com.knobly.kasapa ಬಳಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವಂತಾಗಬೇಕು. ಜಿಲ್ಲೆಯಲ್ಲಿ ಪರಿಷತ್ತಿನ ಶಕ್ತಿಯನ್ನು ಸಂಘಟನಾತ್ಮಕವಾಗಿ ಇನ್ನೂ ಗಟ್ಟಿಗೊಳಿಸುವಂತಾಗಬೇಕು ಎಂದು ಮನವಿ ಮಾಡಿರುವ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಇದಕ್ಕೆ ಸಂಬoಧಪಟ್ಟoತೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ತಮ್ಮನ್ನು (೯೪೮೦೦೪೩೪೫೦) ಸಂಪರ್ಕಿಸುವAತೆ ತಿಳಿಸಿದ್ದಾರೆ.

ಸದಸ್ಯರಾಗ ಬಯಸುವವರು ಲಿಂಕ್ ಡೌನ್ ಲೋಡ ಮಾಡಿಕೊಳ್ಳಬಹುದಾಗಿದೆ, ಅಥವಾ ಪ್ಲೇ ಸ್ಟೋರ್ ನಲ್ಲಿ ಕೂಡಾ ಕಸಾಪ ಆ್ಯಪ್ ಲಭ್ಯವಿದೆ.
https://play.google.com/store/apps/details?id=com.knobly.kasapa

error: