ಬೆಂಗಳೂರು/ಯಶವoತ: ಕರೋನ ಎಂಬ ಮಹಾಮಾರಿಯಿಂದ ರಕ್ಷಣೆ ಪಡೆಯಲು ದೇಶದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಈ ಸಮಯದಲ್ಲಿ ಕೂಲಿಕಾರ್ಮಿಕರು, ನಿರ್ಗತಿಕರು ಸ್ಲಂ ವಾಸ ಮಾಡುವವರು ಹಾಗೂ ಮಂಗಳಮುಖಿಯರು ತಮ್ಮ ದಿನನಿತ್ಯದ ಜೀವನ ನಡೆಸಲು ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡು ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಡಾ ಎಂ.ಜೆ ತರುಣ ನೆರವಿಗೆ ಧಾವಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ೩೭ ದಿನಗಳಿಂದ ನಿರಂತರವಾಗಿ ಕೂಲಿಕಾರ್ಮಿಕರಿಗೆ ನಿರ್ಗತಿಕರಿಗೆ ಸ್ಲಂ ನಿವಾಸಿಗಳಿಗೆ ಹಾಗೂ ಮಂಗಳಮುಖಿಯರಿಗೆ ಪ್ರತಿನಿತ್ಯ ಹಗಲು ರಾತ್ರಿ ಸುಮಾರು ೬೦೦ ಆಹಾರ ಪೊಟ್ಟಣ ವಿತರಿಸಿದ್ದಾರೆ. ಪ್ರಸುತ್ತ ಬೆಂಗಳುರಿನ ಯಶವಂತಪುರ
ಸೌಥ್ ವೆಸ್ಟರ್ನ್ ರೈಲ್ವೆ ವೃತ್ತಿ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಸುಮಾರು ೪೦೦ ಸಾರ್ವಜನಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ನೆರವಾಗಿದ್ದರೆ.
ಫಲಾನುಭವಿ ಮಾತನಾಡಿ ದೇಶಾದ್ಯಂತ ಲಾಕ್ ಡೌನ್ ಹಿನ್ನಲೆಯಲ್ಲಿ ನಮ್ಮ ಹೊಟ್ಟೆಪಾಡಿಗಾಗಿ ನಿರ್ವಹಿಸುವ ವೃತ್ತಿ ಕೈ ಕೊಟ್ಟಿದ್ದರ ಪರಿಣಾಮ ದಿನಸಿ ಕೊಳ್ಳು ಹಣವಿರಲಿಲ್ಲ ಇಂತಹ ಸಮಯದಲ್ಲಿ ತರುಣ ಅವರು ನಮಗೆ ಚಿರಪರಿಚಿತರಾದರು ಪ್ರತಿನಿತ್ಯ ಆಹಾರದ ಪೊಟ್ಟಣ ವಿತರಿಸಿರುದಕ್ಕೆ ನಮಗೆ ಅನೂಕೂಲವಾಗಿದೆ ಎಂದರು.
ಎ>ಜೆ.ತರುಣ ಮಾತನಾಡಿ ಎಲ್ಲಡೆ ಕರೋನಾ ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ ಇದರಿಂದ ಹಲವರು ಉದ್ಯಗವಿಲ್ಲದೆ ಪರದಾಡುತ್ತಿದ್ದರು ಇದನ್ನು ಗಮನಿಸಿ ಆಹಾರ ಪೊಟ್ಟಣ ನೀಡಿದ್ದು ಅವಶ್ಯವಿದ್ದವರಿಗೆ ದಿನಸಿ ವಿತರಿಸಿದ್ದೇನೆ ನನ್ನ ಕಾರ್ಯದಿಂದ ಸ್ಪೂರ್ತಿ ಪಡೆದು ಇತರರು ಈ ಕಾರ್ಯಕ್ಕೆ ಮುಂದಾಗಲಿ ಹಸಿವು ಮುಕ್ತ ರಾಜ್ಯವಾಗಲಿ ಎಂದರು.
More Stories
ಶರಾವತಿಯ ನದಿ ತಿರುವಿನ ಮಾರಕ ಯೋಜನೆ
ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ