April 27, 2024

Bhavana Tv

Its Your Channel

ರಾಜ್ಯದ ರವಿವಾರ ಸಂಜೆ ತನಕ ಕರೋನಾ ವೈರಸ್ ಅಪಡೇಟ್

ಬೆಂಗಳೂರು: ಇಡೀ ವಿಶ್ವದೆಲ್ಲಡೆ ಆತಂಕ ಮೂಡಿಸಿದ ಕರೋನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ ಎಲ್ಲಾ ರೀತಿಯ ಸರ್ವೆಕ್ಷಣೆ ಮತ್ತು ಸಮೋಹ ನಿಯಂತ್ರಣ ಕಾರ್ಯತಂತ್ರವನ್ನು ಬಲಪಡಿಸಿದೆ. ದಿನಾಂಕ ೧೦-೫-೨೦೨೦ರ ಸಾಯಂಕಾಲ ೫ ಗಂಟೆಯ ವರದಿ ನಿಮ್ಮ ಮುಂದೆ ಭಾವನ ವಾಹಿನಿ ಇಡುತ್ತಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಟ್ಟು ೮೪೮ ಕೋವಿಡ್ ೧೯ ಖಚಿತಪಟ್ಟ ಪ್ರಕರಣಗಳಿದ್ದು ಅವುಗಳ ಪೈಕಿ ೩೧ ಮರಣ ಹಾಗೂ ೪೨೨ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.


ಆಸ್ಪತ್ರೆಯಲ್ಲಿ ಕೋವಿಡ್೧೯ ಪೀಡಿತ ಒಟ್ಟು ೩೯೪ ವ್ಯಕ್ತಿಗಳಲ್ಲಿ ೩೮೮ ರೋಗಿಗಳು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ೦೬ ವ್ಯಕ್ತಿಗಳನ್ನು ಐ.ಸಿ.ಯು ಇಡಲಾಗಿದೆ. ದಿನಾಂಕ ೦೯-೫-೨೦೨೦ರ ಸಂಜೆಯಿAದ ದಿನಾಂಕ ೧೦-೫-೨೦೨೦ರ ಸಾಯಂಕಾಲ ೫ ಗಂಟೆಯವರೆಗೆ ರಾಜ್ಯದಲ್ಲಿ ೫೪ ಹೊಸ ಪ್ರಕರಣ ಖಚಿತವಾಗಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನಿಡಲಾಗುತ್ತಿದೆ.
ದಿನಾಂಕ ೦೯-೫-೨೦೨೦ರಂದು ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿರುವ ೩೧ ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು ೨೦೬ ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಈವರೆಗೂ ಒಟ್ಟು ೭೪೨೨ ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ರಾಜ್ಯಂದ್ಯ0ತ ೫೩೧ ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು ೧೭೫೫೨ ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಈವರೆಗೂ ಒಟ್ಟು ೩೦೫೭೫೧ ವ್ಯಕ್ತಿಗಳೀಗೆ ತಪಾಸಣೆ ಮಾಡಲಾಗಿದೆ.ರಾಜ್ಯದ ೧೦೪ ಖಾಸಗಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಒಟ್ಟು ೧೯೫೧ ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಈವರೆಗೆ ಒಟ್ಟಾರೆ ೨೩೭೯೭ ವ್ಯಕ್ತಿಗಳಿಗೆ ತಪಾಸಣೆ ನಡೆಸಲಾಗಿದೆ.


ಹೋಮ್ ಕ್ವಾರಂಟೈನ್ : ರಾಜ್ಯದಲ್ಲಿ ದಿನಾಂಕ ೦೯-೫-೨೦೨೦ರಂದು ತಂಡ ಹಾಗೂ ಸಾರ್ವಜನಿಕರ ದೂರಿನ ಅನ್ವಯ ಒಟ್ಟು ೩೧೧ ವ್ಯಕ್ತಿಗಳನ್ನು ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೆ ಒಟ್ಟಾರೆ ೧೪೯೪ ವ್ಯಕ್ತಿಗಳನ್ನು ಮನೆ ಕ್ವಾರಂಟೈನ್ ವರ್ಗಾವಣೆ ಮಾಡಲಾಗಿದೆ. ನಿಯೋಜಿತ ಆಸ್ಪತ್ರೆಯಲ್ಲಿ ದಾಕಳಾಗಿರುವ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ಮತ್ತು ಶಂಕಿತರು ಕನಿಷ್ಟ ೧೪ ದಿನಗಳ ಕಾಲ ಅಥವಾ ಪಾಸಟಿವ್ ಪ್ರಕರಣದ ಸರಣೆ ಮಾದರಿಗಳು ನಗಟೇವ್ ಎಂದು ಸಾಬೀತಾಗುವ ತನಕ ಅಥವಾ ಅವರಿಗೆ ಚಿಕಿತ್ಸೆ ನೀಡುವ ವೈದ್ರಯರ ಸಲಹೆ ಸಿಗುವವರೆಗೆ ಸಂಭದಿಸಿದ ವ್ಯಕ್ತಿಗೆ ಬಿಡುಗಡೆ ಇಲ್ಲ. ಪ್ರತೈಕ ವ್ಯವಸ್ಥೆಯಲ್ಲಿ ಇಷ್ಟೋಂದು ದಿನಗಳ ಕಾಲ ಸಂಯಮದಿ0ದ ಇರಲು ಮಾನಸಿಕ ಸ್ಥೆöÊರ್ಯದ ಅಗತ್ಯವಿದ್ದು ಇಲಾಖೆ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಅದರಂತೆ ದಿನಾಂಕ ೦೯-೫-೨೦೨೦ರಂದು ಒಟ್ಟು ೧೫೭೮ ಸಂಖ್ಯೆ ಮತ್ತು ಇಲ್ಲಿಯವರೆಗೆ ಒಟ್ಟಾರೆ ೭೬೦೪೦ ಸಂಖ್ಯೆಯ ಸಂಪರ್ಕಿತ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ.
ಕೋವಿಡ್ ೧೯ ಕುರಿತ ಕರೆಗಳಿಗಾಗಿ ೨೧೦ ಆಸನಗಳನ್ನು ಮೀಸಲಿರಿಸಲಾಗಿದೆ. ದಿನಾಂಕ ೦೯-೫-೨೦೨೦ರಂದು ೬೮೮೭ ಕರೆಗಳನ್ನು ಸ್ವೀಕರಿಸಿದ್ದು ಆಪ್ತಮಿತ್ರ ಆರೊಗ್ಯ ಸಹಾಯವಾಣೆಯಲ್ಲಿ ದಿನಾಂಕ ೦೯-೫-೨೦೨೦ರಂದು ೭೧೨೬ ಕರೆಗಳು ಮತ್ತು ಒಟ್ಟಾರೆಯಾಗಿ ೭೭೪೯೮ ಕರೆಗಳನ್ನು ಸ್ವೀಕರಿಸಲಾಗಿದೆ.

error: