May 29, 2023

Bhavana Tv

Its Your Channel

ಕರ್ನಾಟಕ ಸಿಇಟಿ ಪರೀಕ್ಷಾ ದಿನಾಂಕ ನಿಗಧಿ : ಜುಲೈ ೩೦, ೩೧ಕ್ಕೆ ಪರೀಕ್ಷೆ ದಿನಾಂಕ ಫಿಕ್ಸ್

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟಿದ್ದಂತ ಕಾಮನ್ ಎಂಟೆರೆನ್ಸ್ ಟೆಸ್ಟ್ (ಸಿಇಟಿ) ೨೦೨೦ರ ಪರೀಕ್ಷಾ ದಿನಾಂಕ ಕೊನೆಗೂ ನಿಗಧಿಗೊಂಡಿದೆ. ರ‍್ನಾಟಕ ಸಿಇಟಿ ಪರೀಕ್ಷೆಯನ್ನು ಜುಲೈ ೩೦, ೩೧ರಂದು ನಡೆಸಲಾಗುತ್ತದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಲಾಕ್ ಡೌನ್ ನಿಂದಾಗಿ ಸಿಇಟಿ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿತ್ತು. ಇಂತಹ ಪರೀಕ್ಷೆಗಾಗಿ ಮತ್ತೆ ಅರ್ಜಿ ಸಲ್ಲಿಸಲು ಮೇ.೮ರಿಂದ ೧೮ರ ವರೆಗೆ ಅವಕಾಶ ಕೂಡ ನೀಡಲಾಗಿತ್ತು. ಇದೀಗ ವಿದ್ಯರ‍್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಟಿಟಿ ಪರೀಕ್ಷಾ ದಿನಾಂಕವನ್ನು ಜುಲೈ ೩೦, ೩೧ಕ್ಕೆ ನಿಗಧಿ ಪಡಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

source: News hunt

About Post Author

error: