December 20, 2024

Bhavana Tv

Its Your Channel

ರಾಜ್ಯಕ್ಕೆ ಮತ್ತೆ ಕಾಡುತ್ತಲ್ಲೆ ಇದೆ “ಮಹಾ” ಸಂಪರ್ಕಸೊ0ಕು, ಮಧ್ಯಾಹ್ನದೊಳಗೆ ೬೯ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು ೬೯ ಜನರಿಗೆ ಕೋವಿಡ್-೧೯ ಸೋಂಕು ದೃಢವಾಗಿದ್ದು, ಓರ್ವ ಮಹಿಳೆ ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ೨೧೫೮ಕ್ಕೆ ಏರಿಕೆಯಾಗಿದೆ.
ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಿದ ಪರಿಣಾಮ ಕೊರೊನಾ ಸೋಂಕಿತರ ಪ್ರಕರಣ ಇಳಿಕೆಯಾದರೂ, ಇದುವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮನಗರಕ್ಕೆ ತಮಿಳುನಾಡು ನಂಜು ತಗುಲಿದ್ದು, ೨ ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್-೧೯ನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಂದು ೬೯ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೨೧೫೮ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನ ೨೬ ಮಂದಿ ರೋಗದಿಂದ ಗುಣಮುಖವಾಗುವುದರ ಮೂಲಕ ಸೋಂಕಿನಿ0ದ ಗುಣಮುಖವಾಗಿರುವವರ ಸಂಖ್ಯೆ ೬೮೦ಕ್ಕೆ ಏರಿಕೆಯಾಗಿದೆ.
ಮಧ್ಯಾಹ್ನದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ ಬುಲೆಟಿನ್ ಮಾಹಿತಿ ಪ್ರಕಾರ, ಉಡುಪಿ ೧೬, ಬೆಂಗಳೂರು ೬, ಮಂಡ್ಯ ೨, ಬೆಳಗಾವಿ ೧, ದಕ್ಷಿಣ ಕನ್ನಡ ೩, ಯಾದಗಿರಿ ೧೫, ಕೋಲಾರ ೨, ತುಮಕೂರು ೧, ವಿಜಯಪುರ ೧, ಬೀದರ್ ೧, ಕಲಬುರಗಿ ೧೪, ಬಳ್ಳಾರಿ ೩, ಧಾರವಾಡ ೩, ರಾಮನಗರ ೧ ಸೇರಿದಂತೆ ೬೯ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರಲ್ಲಿ ೫೨ ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ೩ ಮಂದಿ ವಿದೇಶದಿಂದ ವಾಪಸಾದವರಾಗಿದ್ದಾರೆ. ಮತ್ತೊಬ್ಬರು ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇವರಲ್ಲಿ ೯ ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದವರಲ್ಲಿ ಸೋಂಕಿತರ ಸಂಪರ್ಕದಿ0ದ ರೋಗ ತಗುಲಿದೆ.

error: