October 3, 2024

Bhavana Tv

Its Your Channel

ರಾಜ್ಯಕ್ಕೆ ಬಿಗ್​ ಶಾಕ್​; ಒಂದೇ ದಿನ ಸೆಂಚುರಿ ಬಾರಿಸಿದ ಕೊರೊನಾ ಸೋಂಕು

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಮಂಗಳವಾರ ಭರ್ಜರಿ ಶತಕ ಬಾರಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 100 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮದ್ಯಾಹ್ನದ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

ಇಂದು ಎಲ್ಲೆಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ..?

  • ಕೋಲಾರ-02
  • ದಾವಣಗೆರೆ-11
  • ಯಾದಗಿರಿ-14
  • ಹಾಸನ-13
  • ಕೊಪ್ಪಳ-01
  • ಬಳ್ಳಾರಿ-01
  • ಉಡುಪಿ-03
  • ಬೆಳಗಾವಿ-13
  • ಬಾಗಲಕೋಟೆ-01
  • ದಕ್ಷಿಣ ಕನ್ನಡ-03
  • ಚಿಕ್ಕಬಳ್ಳಾಪುರ-01
  • ಚಿತ್ರದುರ್ಗ -20
  • ಬೆಂಗಳೂರು ನಗರ-02
  • ವಿಜಯಪುರ-05
  • ಬೀದರ-10

ಒಟ್ಟಾರೆಯಾಗಿ ಇಂದು ಹೊಸದಾಗಿ 100 ಜನರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ 44 ಜನರು ಬಲಿಯಾಗಿದ್ದಾರೆ. ಇದುವರೆಗೆ 722 ಕೊರೊನಾ ವೈರಸ್ ಸೋಂಕು ಪೀಡಿತರು ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

error: