ಗುಂಡ್ಲುಪೇಟೆ : ತಾಲೂಕಿನ ಮದ್ದೂರಲ್ಲಿ ಗಜಪಯಣಕ್ಕೆ ಶಾಸಕರಿಂದ ಚಾಲನೆ ದೊರೆಯಿತು. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ರಾಂಪುರದ ಆನೆ ಚೈತ್ರ ಮತ್ತು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಬಂಡೀಪುರ ಹುಲಿ ಸಂರಕ್ಷಣೆ ಪ್ರದೇಶದ ಮದ್ದೂರು ವಲಯ ಕಚೇರಿಯಲ್ಲಿ ಗಜಪಯಣಕ್ಕೆ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ನಮ್ಮ ಆನೆಗಳು ದಸರಾಕ್ಕೆ ಹೋಗುತ್ತಿವೆ ಎಂದರೆ ನಮಗೆ ಹೆಮ್ಮೆ ಆಗುತ್ತಿದೆ ಎಂದರು,
ಶನಿವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಮೈಸೂರು ದಸರಾದಲ್ಲಿ ಭಾಗವಹಿಸಲು ಆಯ್ಕೆಯಾದ ರಾಂಪುರ ಶಿಬಿರದಲ್ಲಿದ್ದ ಚೈತ್ರ ಮತ್ತು ಲಕ್ಷ್ಮಿಗೆ ಇದೇ ಮೊದಲ ಬಾರಿಗೆ ಶಾಸಕರು ಪೂಜೆ ಸಲ್ಲಿಸಿದರು.
ಶಾಸಕರಾದ ಸಿಎಸ್ ನಿರಂಜನ್ ಕುಮಾರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕರಾದ ಕೆ ವಿ ಗೋಪಾಲಕೃಷ್ಣ ಭಟ್ಟರು, ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್‌ಆರ್ ನಟೇಶ್, ಎಸಿಎಫ್ ಕೆ ಪರಮೇಶ್, ಎಂ ಎಸ್ ರವಿಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಸುಧಾಕರ್ ಕೆ ನಾಯಕ್, ಬಿಜೆಪಿಯ ಮಂಡಲ ಅಧ್ಯಕ್ಷ ದೊಡ್ಡಿ ಜಗದೀಶ್ ,ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬಸವಣ್ಣ , ಎಂಸಿ ರಾಜಶೇಖರ್, ಪ್ರವೀಣ್ ನಂದೀಶ್ ಇನ್ನು ಮುಂತಾದವರು ಹಾಜರಿದ್ದರು.
ವರದಿ ; ಸದಾನಂದ ಗುಂಡ್ಲುಪೇಟೆ
More Stories
ಚಾಮರಾಜನಗರದಲ್ಲಿ ಆಗಸ್ಟ್ 20 ರಂದು ಭೀಮ ಸಂಕಲ್ಪ ಸಮಾವೇಶ
ಗುಂಡ್ಲುಪೇಟೆಯಲ್ಲಿ ಸಾಂತ್ವನ ಯಾತ್ರೆ.
ಚೆಂಡು ಹೂ ಸಂಸ್ಕರಣ ಘಟಕದ ವಿಷಯಕ್ಕೆ ಸಂಬOಧಿಸಿದOತೆ ರೈತ ಸಂಘ ಮತ್ತು ರೈತರಲ್ಲಿ ಪರ ವಿರೋಧದ ಪ್ರತಿಭಟನೆ