December 22, 2024

Bhavana Tv

Its Your Channel

ಈಶ ಫೌಂಡೇಶನ್ ಅಸೋಸಿಯೇಷನ್ ವತಿಯಿಂದ ಕಾವೇರಿ ಕೂಗು ಕಾರ್ಯಕ್ರಮ

ಗುಂಡ್ಲುಪೇಟೆ : ಈಶ ಫೌಂಡೇಶನ್ ಅಸೋಸಿಯೇಷನ್ ವತಿಯಿಂದ ನಡೆದ ಕಾವೇರಿ ಕೂಗು ಎಂಬ ಕಾರ್ಯಕ್ರಮ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಇರುವ ೧೩೧ ಗ್ರಾಮ ಪಂಚಾಯಿತಿ ಗಳಲ್ಲಿ ನಡೆಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಅದರಂತೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಕೇಂದ್ರಬಿAದು ವಾಗಿರುವ ಭೀಮನಬೀಡು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಬಿಜಿ ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಮ್ಮ ನಿಮ್ಮ ಜಮೀನಿನಲ್ಲಿ ಮರಗಳನ್ನು ನೆಡಸಿ ಮತ್ತು ಲಕ್ಷಾಧಿಪತಿ ಗಳಾಗಿರಿ ಎಂದು ಈ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಿದ್ದಾರೆ ಮತ್ತು ರೈತರು ಮರಗಳನ್ನು ನೆಟ್ಟು ನದಿ ಮೂಲಗಳನ್ನು ಸಂರಕ್ಷಣೆ ಮಾಡಿದರೆ ಮಾತ್ರ ಮುಂದಿನ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಅಲ್ಲದೆ ಮರಗಳನ್ನು ದಿನದಿಂದ ದಿನಕ್ಕೆ ಕಡಿಯುತ್ತಿದ್ದರೆ ಯಾವುದೇ ಕಾರಣಕ್ಕೂ ನದಿಗಳು ಉಳಿಯುವುದಿಲ್ಲ ಹಾಗಾಗಿ ರೈತರು ಮೂರನೇ ಒಂದು ಭಾಗದಷ್ಟು ಮರಗಳನ್ನ ನೆಟ್ಟಿದ್ದಲ್ಲೀ ಅರಣ್ಯ ಇಲಾಖೆಯವರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೇಗ ,ಬೀಟೆ, ಹೊನ್ನೇ, ರಕ್ತಚಂದನ, ಇನ್ನು ಮುಂತಾದ ಬೆ ಲೆಬಾಳುವ ಸಸಿಗಳನ್ನು ನೀಡುತ್ತಿದ್ದಾರೆ ಹಾಗಾಗಿ ರೈತರು ನೆಟ್ಟಿ ಸಾಕಿದ ಮರಗಳನ್ನ ರೈತರ ಮಕ್ಕಳ ವಿವಾಹ ಸಂದರ್ಭದಲ್ಲಿ ಇದು ಕೈ ಹಿಡಿಯುತ್ತದೆ ಎಂದು ತಿಳಿಸಿದರು. ತೇಗ, ಬೀಟೆ ,ಹೊನ್ನೆ ,ಮಹಾಗನಿ, ಮತ್ತು ರಕ್ತ ಚಂದನ, ಮರಗಳನ್ನು ರೈತರು ಅವರ ಜಮೀನುಗಳಲ್ಲಿ ಬೆಳೆಸಿದರೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮರಗಳಿಂದ ಮಾಡಲ್ಪಟ್ಟಿರುವ ಟಿಂಬರ್ ಮತ್ತು ಪೀಠೋಪಕರಣಗಳಿಗೆ ಅನುಕೂಲವಾಗು ತದೇ ಬೇರೆ ಕಡೆಗೆ ಹಣ ನೀಡಿ ಖರೀದಿ ಮಾಡುವ ಬದಲು ಮತ್ತು ಇವರೇ ನೆಟ್ಟಿರುವ ಮರಗಳಿಂದ ಎಲ್ಲಾ ಅನುಕೂಲಗಳನ್ನು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಗುರುಲಿಂಗಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿಜಿ ಶಿವಕುಮಾರ್, ಸದಸ್ಯರಾದ ಜಿ ಸ್ವಾಮಿ ,ರವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಮಲ್ಲಪ್ಪ ಹಾಗೂ ಶಾಲೆಯ ಶಿಕ್ಷಕರು, ಮತ್ತು ಇಶಾ ಫೌಂಡೇಶನ್ ಅಸೋಸಿಯೇಷನ್ ಅಧಿಕಾರಿಗಳು ರೈತರು ಗ್ರಾಮಸ್ಥರು ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ. ಸದಾನಂದ ಕಣ್ಣೆಗಾಲ ಗುಂಡ್ಲುಪೇಟೆ

error: