ಗುಂಡ್ಲುಪೇಟೆ; ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಳವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಬ್ರಹ್ಮಾನಂದ ಮಾತನಾಡಿ ವಿಶ್ವಕರ್ಮ ಜಯಂತಿಯನ್ನು ನಾವು ಸರ್ಕಾರದ ಮಟ್ಟದಲ್ಲಿ ಮಾಡಿಕೊಂಡು ಪ್ರತಿವರ್ಷ ಬಂದಿದ್ದೇವೆ ಹಾಗಾಗಿ ನಮ್ಮ ತಾಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ ನಮ್ಮ ಸಮಾಜ ದವರು ಮೂಲ ಕಸುಬು ನ್ನು ವೃತ್ತಿಯಾಗಿಸಿಕೊಂಡು ಬಂದಿದ್ದಾರೆ ಈಗಿನ ಸರಕಾರದ ಸವಲತ್ತುಗಳನ್ನು ಪಡೆಯಲು ಶಿಕ್ಷಣ ಬಹಳ ಮುಖ್ಯ ಮತ್ತು ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯ ಚುನಾಯಿತ ಪ್ರತಿನಿಧಿಗಳು ಮುಂದೆ ಬರಬೇಕಾದರೆ ಅವರಿಗೆ ಶಿಕ್ಷಣ ಅತ್ಯುತ್ತಮ ಒಂದು ಸಮಾಜ ಗುರುತಿಸಿಕೊಂಡು ಮುಂದೆ ಬರಬೇಕಾದರೆ ಅಲ್ಲಿನ ಸಂಘಟನೆ ಬಹಳ ಮುಖ್ಯವಾದದ್ದು ಎಂದು ಈ ಸಂದರ್ಭದಲ್ಲಿ ತಿಳಿಸಿದರು
ನಂತರ ತಾಲೂಕು ದಂಡಾಧಿಕಾರಿ ಯವರಾದ ರವಿಶಂಕರ್ ಮಾತನಾಡಿ ವಿಶ್ವಕರ್ಮ ಜಯಂತಿಯನ್ನು ಕಳೆದ ಏಳು ವರ್ಷಗಳಿಂದ ಸರ್ಕಾರ ಆಚರಣೆಯನ್ನು ಮಾಡಿಕೊಂಡು ಬಂದಿದ್ದೆ. ಈ ನಿಟ್ಟಿನಲ್ಲಿ ನಾವು ಕೂಡ ಕಳೆದ ಎರಡು ವರ್ಷದಿಂದ ಕೋವಿಡ್ ಇರುವ ಕಾರಣದಿಂದ ಸರಳವಾಗಿ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಅಲ್ಲದೆ ತಾಲೂಕಿನಲ್ಲಿ ೧೨೦೦೦ ಜನ ಸಂಖ್ಯೆ ವಿಶ್ವಕರ್ಮ ಸಮಾಜದವರು ಇದ್ದಾರೆ ಮತ್ತು ರಾಜ್ಯದಲ್ಲಿ ೪೫ಲಕ್ಷ ಜನ ಸಂಖ್ಯೆ ಇದ್ದಾರೆ. ಈ ಸಮಾಜದವರಿಗೆ ಮೀಸಲಾತಿಯನ್ನು ನೀಡಿದೆ. ಹಾಗಾಗಿ ನಿಮ್ಮ ಸಮಾಜದವರು ಶಿಕ್ಷಣದಲ್ಲಿ ಮುಂದೆ ಬರಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ನಿಮ್ಮನ್ನು ನೀವು ತೊಡಗಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು. ಅದಕ್ಕಾಗಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದರು
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಪಿ. ಗಿರೀಶ್ ಮಾತನಾಡಿ ವಿಶ್ವ ಕರ್ಮ ಸಮಾಜದವರು ಪಂಚ ವೃತ್ತಿ ಕುಲಕಸುಬುಗಳನ್ನು ಆಗಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ತಾಲೂಕಿನಲ್ಲಿ ೧೨ ಸಾವಿರ ಜನಸಂಖ್ಯೆ ಉಳ್ಳ ಸಮಾಜದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಮತ್ತು ನಿಮ್ಮ ಸಮಾಜದವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನೀವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗಿದ್ದಲ್ಲಿ ಮಾತ್ರಸಾದ್ಯ. ಎಂದರು ಅಲ್ಲದೆ ವಿಶ್ವಕರ್ಮ ಜಯಂತಿಯ ದಿನದಂದು ಈ ಸಮಾಜದವರಿಗೆ ಒಂದು ಸಿಎ ನಿವೇಶನವನ್ನು ಮಾಡಿಕೊಡಲು ಶಾಸಕರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ವಿಶ್ವಕರ್ಮ ರಾಜ್ಯ ಮಹಿಳಾ ಅಧ್ಯಕ್ಷರಾದ ಶೋಭಾ, ತಾಲೂಕು ವಿಶ್ವಕರ್ಮ ಅಧ್ಯಕ್ಷರಾದ ಬ್ರಹ್ಮಾನಂದ, ಪುರಸಭೆ ಅಧ್ಯಕ್ಷ ಪಿ ಗಿರೀಶ್ ಉಪಾಧ್ಯಕ್ಷರಾದ ಅಶ್ವಿನಿ ದೀಪಿಕ, ತಾಲೂಕು ದಂಡಾಧಿಕಾರಿಗಳಾದ ರವಿಶಂಕರ್, ಇ ಓ. ಕಾಂತರಾಜ ಅರಸ್, ಆರಕ್ಷಕವೃತ್ತ ನಿರೀಕ್ಷಕರಾದ ಮಹದೇವಸ್ವಾಮಿ, ಮಾನವ ಬಂಧುತ್ವ ವೇದಿಕೆ ಆರ್ ಸೋಮಣ್ಣ, ರಂಗಸ್ವಾಮಿ, ರಮೇಶ್, ಸಿಸಿ ದೇವರಾಜ್, ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್, ಹಾಗೂ ವಿಶ್ವಕರ್ಮ ಸಮಾಜದ ಎಲ್ಲ ಮುಖಂಡರುಗಳು ಅಧಿಕಾರಿಗಳು ಹಾಜರಿದ್ದರು.
ವರದಿ.ಸದಾನಂದ ಕನ್ನೇಗಾಲ ಗುಂಡ್ಲುಪೇಟೆ ತಾಲೂಕು
More Stories
ಚಾಮರಾಜನಗರದಲ್ಲಿ ಆಗಸ್ಟ್ 20 ರಂದು ಭೀಮ ಸಂಕಲ್ಪ ಸಮಾವೇಶ
ಗುಂಡ್ಲುಪೇಟೆಯಲ್ಲಿ ಸಾಂತ್ವನ ಯಾತ್ರೆ.
ಚೆಂಡು ಹೂ ಸಂಸ್ಕರಣ ಘಟಕದ ವಿಷಯಕ್ಕೆ ಸಂಬOಧಿಸಿದOತೆ ರೈತ ಸಂಘ ಮತ್ತು ರೈತರಲ್ಲಿ ಪರ ವಿರೋಧದ ಪ್ರತಿಭಟನೆ