ಚಾಮರಾಜನಗರ ; ಜಿಲ್ಲಾ ಕೇಂದ್ರದಲ್ಲಿ ಆಗಸ್ಟ್ 20 ರಂದು ದಲಿತ ಸಂಘಟನೆ, ಮಾನವ ಬಂಧುತ್ವ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಹಾಗೂ ದಲಿತ ಸಂಘರ್ಷ ಸಮಿತಿ ಜೊತೆಗೂಡಿ ಸಂವಿಧಾನದ ಆಶಯಗಳ ಉಳಿವಿಗಾಗಿ ಭೀಮ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕೆ.ಎಂ.ನಾಗರಾಜ್ ಹೇಳಿದರು.
ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ಸಂಘಟನೆಗಳು,ಮಾನವ ಬಂಧುತ್ವ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳು ದಲಿತ ಸಂಘರ್ಷ ಸಮಿತಿ ಜೊತೆಗೂಡಿ ಚಾಮರಾಜನಗರದಲ್ಲಿ ಸಂವಿಧಾನದ ಆಶಯಗಳ ಉಳಿವಿಗಾಗಿ ಭೀಮ ಸಂಕಲ್ಪ ಸಮಾವೇಶದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಭಂತೇಜಿ ಮತ್ತು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು ವಹಿಸಿಲ್ಲಿದ್ದಾರೆ .
ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ .ಸಿ.ಮಹದೇವಪ್ಪ , ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ,ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ , ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ , ಶಾಸಕರಾದ ಎ.ಆರ್ .ಕೃಷ್ಣಮೂರ್ತಿ ,ಹೆಚ್ .ಎಂ.ಗಣೇಶ್ ಪ್ರಸಾದ್, ದರ್ಶನ್ ಧೃವನಾರಾಯಣ ಭಾಗವಹಿಸುವರು.ಸಮಾವೇಶದ ಅಧ್ಯಕ್ಷತೆಯನ್ನು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ರವರು ವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ಮಾತನಾಡಿ ಇದೇ ತಿಂಗಳು 20ರಂದು ನಡೆಯುವ ಸಂವಿಧಾನ ಆಶಯಗಳ ಉಳಿವಿಗಾಗಿಬೃಹತ್ ಸಮಾವೇಶಕ್ಕೆ ತಾಲೂಕಿನ ಮತ್ತು ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿಸಿದರು . ಈ ಸಂದರ್ಭದಲ್ಲಿ
ಆರ್ ಸೋಮಣ್ಣ , ಡಿ. ಎಸ್ ಎಸ್ ಮುಖಂಡರುಗಳಾದ ನಂಜುAಡಸ್ವಾಮಿ, ರಂಗಸ್ವಾಮಿ, ಬಂಗಾರು ಸ್ವಾಮಿ ,ಕೃಷ್ಣಮೂರ್ತಿ ,ಸಿದ್ದರಾಜು ದೊಡ್ದರಾಯಪೇಟೆ ,ನಾಗಶೇಕರ್ ,ಕುಮಾರ್, ಸಿದ್ದರಾಜು ರಾಮಸಮುದ್ರ. ನಾಗ ಶೇಖರ್ ,ನಾಗಯ್ಯ ,ಸೋಮಣ್ಣ , ಕೆ.ಎಂ.ಮನಸ್ , ಯೋಗೇಶ್ ಚಿಕ್ಕತುಪ್ಪೂರು, ಪ್ರಕಾಶ್ ಬೆಂಡರವಾಡಿ , ದೊಡ್ಡ ರಾಜ್ ,ಪರಮೇಶ್, ಅರುಣ್ ,ಅರುಣ್ ಗ್ರಾ.ಸದಸ್ಯರು, ರಾಮು ಪುತ್ತನಪುರ ,ಶ್ರೀನಿವಾಸ್ ಕುಣಗಳ್ಳಿ ,ಬಸವಣ್ಣ ,ಮುಂತಾದವರು ಉಪಸ್ಥಿತರಿದ್ದರು.
ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ
More Stories
ಗುಂಡ್ಲುಪೇಟೆಯಲ್ಲಿ ಸಾಂತ್ವನ ಯಾತ್ರೆ.
ಚೆಂಡು ಹೂ ಸಂಸ್ಕರಣ ಘಟಕದ ವಿಷಯಕ್ಕೆ ಸಂಬOಧಿಸಿದOತೆ ರೈತ ಸಂಘ ಮತ್ತು ರೈತರಲ್ಲಿ ಪರ ವಿರೋಧದ ಪ್ರತಿಭಟನೆ
ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರಳವಾಗಿ ವಿಶ್ವಕರ್ಮ ಜಯಂತಿ ಆಚರಣೆ.