ಗುoಡ್ಲುಪೇಟೆ: ಸಂಯುಕ್ತ ಕಿಸಾನ್ ಮೋರ್ಚ್ ಹಾಗೂ ರಾಜ್ಯ ರೈತ ಸಂಘದ ಕರೆ ನೀಡಿದ್ದ ಭಾರತ ಬಂದ್ಗೆ ಪಟ್ಟಣದ ಹೋಟೆಲ್ ಮಾಲೀಕರು ಹಾಗೂ ಅಂಗಡಿ ಮಾಲೀಕರುಗಳು ಉದ್ಯಮಿಗಳು ವರ್ತಕರು ಸೇರಿದಂತೆ ಅನೇಕ ಸಾರ್ವಜನಿಕರು ಕೂಡ ಬೆಂಬಲ ನೀಡಿದರು .
ಸುಮಾರು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಮೈಸೂರು ಮತ್ತು ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಹಾಕುವುದರ ಮೂಲಕ ರೈತರಿಗೆ ಮರಣಶಾಸನ ವಾಗಿರುವ ಈ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕುವoತೆ ಆಗ್ರಹಿಸಿದ ಪ್ರತಿಭಟನಾಕಾರರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನತೆಗೆ ಕೂಡಲೇ ಏಳಿಕೆ ಮಾಡುವಂತೆ ಮತ್ತು ಡೀಸೆಲ್ ಹಾಗೂ ಪೆಟ್ರೊಲ್ ಬೆಲೆ , ದಿನಸಿ ಪದಾರ್ಥದ ಬೆಲೆ ಕೂಡಲೇ ಇಳಿಕೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಅಂಗಡಿ ಬೀದಿಗಳು ಬಿಕೋ ಎನ್ನುತ್ತಿದ್ದು ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು… ಸುಮಾರು ಹೆಚ್ಚು ಗಂಟೆಗಳ ಕಾಲ ಸರಕು ಸಾಗಾಣಿಕೆ ಲಾರಿಗಳು ಹಾಗೂ ಹೊರರಾಜ್ಯದ ಪ್ರಯಾಣಿಕರು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪರದಾಡುವಂತಾಯಿತು.
ಇತ್ತ ಕೆಎಸ್ಸಾರ್ಟಿಸಿ ಬಸ್ ಕೂಡ ರಸ್ತೆಗೆ ಇಳಿಯದೆ ಇರುವುದು ಕಂಡುಬAತು. ಈ ಸಂದರ್ಭದಲ್ಲಿ ತಾಲೂಕಿನ ರೈತ ಸಂಘದವರು ಮತ್ತು ಕನ್ನಡಪರ ಸಂಘಟನೆಗಳು ಭಾಗಿಯಾಗಿದ್ದರು ..
ವರದಿ :ಸದಾನಂದ ಕಣ್ಣೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.