ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ನೂತನವಾಗಿ ನಿರ್ಮಾಣವಾಗಿರುವ ಚಾಮರಾಜನಗರ ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್ ಕಾಮ್ಸ್) ಮತ್ತು ಇದನ್ನು ಉದ್ಘಾಟನೆ ಮಾಡಿದ ಎಲ್ಲರಿಗೂ ಕಾವಲುಪಡೆಯ ತಾಲೂಕು ಸಂಘಟನೆಯ ವತಿಯಿಂದ ಧನ್ಯವಾದಗಳನ್ನ ತಿಳಿಸಿದರು
ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಮಾಲಿಕ್ ಮಾತನಾಡಿ ಪಟ್ಟಣದಲ್ಲಿ ಇರುವ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಂದು ಉತ್ತಮ ಗುಣಮಟ್ಟದ ಹಣ್ಣು-ಹಂಪಲುಗಳು ತಂಪು ಪಾನೀಯಗಳನ್ನು ಕಡಿಮೆ ದರದಲ್ಲಿ ಸಿಗುತ್ತಿದೆ. ಈ ಹಿಂದೆ ಆಸ್ಪತ್ರೆಯಿಂದ ರೋಗಿಗಳು ಅರ್ಧ ಕಿಲೋಮೀಟರ್ ಹೋಗಿ ಹಣ್ಣು-ಹಂಪಲು ತರಬೇಕಾದ ಪರಿಸ್ಥಿತಿ ಇತ್ತು ಈಗ ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ .
ಈ ಸಂದರ್ಭದಲ್ಲಿ ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಎ. ಅಬ್ದುಲ್ ಮಾಲಿಕ್, ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಕಾರ್ಯಾಧ್ಯಕ್ಷರಾದ ಇಲಿಯಸ್, ಸಲಹೆಗಾರರಾದ ಎಸ್ ಮುಬಾರಕ್, ಟೌನ್ ಉಪಾಧ್ಯಕ್ಷರಾದ ಸಾಧಿಕ್ ಪಾಶ, ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಎಚ್ ರಾಜು, ಸಂಚಾಲಕರಾದ ಮಿಮಿಕ್ರಿ ರಾಜು ಹಾಜರಿದ್ದರು.
ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.