December 20, 2024

Bhavana Tv

Its Your Channel

ಚಾಮರಾಜನಗರ ಗುಂಡ್ಲುಪೇಟೆ ಕುಡಿಯುವ ನೀರಿನ ಹಾಹಾಕಾರ, ಪುತ್ತನಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ.

ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು. ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಅಲ್ಲಿನ ಬೇಜವಾಬ್ದಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದೆ ನಿರ್ಲಕ್ಷ ತೋರುತಿದ್ದಾರೆ ಅಲ್ಲದೆ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಯಾವೊಬ್ಬ ಸಂಬoಧಪಟ್ಟ ಅಧಿಕಾರಿಗಳು ಬಂದಿಲ್ಲವೆAದು ಪ್ರತಿಭಟನಾಕಾರರು ದಿಕ್ಕಾರ ಕೂಗಿದರು.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅಡಿ ಗ್ರಾಮಗಳಲ್ಲಿ ಪೈಪ್ಲೈನ್‌ಗಳು ಆಗಿವೆ ಆದರೆ ನೀರು ಬಿಡುವುದನ್ನು ಇಂದಿಗೂ ಸಹ ಸಂಬAಧಪಟ್ಟ ಅಧಿಕಾರಿಗಳಾಗಲಿ ಗ್ರಾಮ ಪಂಚಾಯತಿಯ ಆಡಳಿತ ವರ್ಗದವ ರಾಗಲಿ ಇದುವರೆಗೆ ಸ್ಪಂದಿಸಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಲ್ಲ . ಎಂದು ಪ್ರತಿಭಟಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಮಾತನಾಡಿ. ನಮ್ಮ ಗ್ರಾಮದಲ್ಲಿ ಪಂಚಾಯಿತಿ ಇದ್ದು ಗ್ರಾಮ ಪಂಚಾಯಿತಿಗೆ ಮನವಿ ಕೊಟ್ಟರು. ಇದುವರೆಗೆ ಯಾರೂ ಸಹ ಸ್ಪಂದಿಸಿಲ್ಲ ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯ ಅಡಿಯಲ್ಲಿ ಎಲ್ಲಾ ಗ್ರಾಮಗಳಿಗೂ ೨೪ಗಂಟೆ ಕುಡಿಯುವ ನೀರಿನ ಯೋಜನೆ ಬಂದಿದೆ. ಆದರೆ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು. ನೀರಿನ ಸಮಸ್ಯೆ ಯನ್ನೂ ನೀಗಿಸಲುಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಪಂಚಾಯಿತಿಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು
. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಸ್ವಾಮಿ , ರಾಜಶೇಖರ ಮಹಾದೇವಸ್ವಾಮಿ, ಸುರೇಶ್ ಸಾರ್ವಜನಿಕ ರು ಮತ್ತು ಸ್ಥಳೀಯ ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು.

ವರದಿ ಸದಾನ೦ದ ಕನ್ನೆ ಗಾಲ ಗುಂಡ್ಲುಪೇಟೆ

error: