December 22, 2024

Bhavana Tv

Its Your Channel

ಗುಂಡ್ಲುಪೇಟೆ ;ಕಾವಲುಪಡೆಯ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ

ಗುಂಡ್ಲುಪೇಟೆ . ಪಟ್ಟಣದ ಸರ್ಕಾರಿ ಶಾಲೆ ಎದುರು ಕಾವಲುಪಡೆಯ ಕಚೇರಿಯ ಮುಂಭಾಗದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ೬೬ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಕನ್ನಡದ ನೆಲ-ಜಲ ನಾಡು ನುಡಿಯ ಬಗ್ಗೆ ವಿಶ್ಲೇಷಿಸಿದರು. ಹಾಗೆ ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಶೋಕ್ ರಾಜ್ ಮಾತನಾಡಿ ಕನ್ನಡ ಪರವಾಗಿ ಹಲವಾರು ವಿಚಾರಗಳನ್ನು ತಿಳಿಸಿದರು.ಹಿರಿಯ ಹೋರಾಟಗಾರರಾದ ಬ್ರಹ್ಮಾನಂದರವರು ಮಾತನಾಡಿ ಕಾವಲುಪಡೆಯ ಕಾರ್ಯವನ್ನು ಮುಕ್ತಕಂಠದಿAದ ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿ ಯಾದ ಇಲಿಯಾಸ್ ರವರು ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಶೀದ್, ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಕಾರ್ಯದರ್ಶಿಗಳಾದ ಮುಬಾರಕ್,ಸಂಚಾಲಕರಾದ ಗುಂಜುಟ್ಟಿ ,ಉಪಾಧ್ಯಕ್ಷರಾದ ಸಾಧಿಕ್ ಪಾಷಾ, ಮಿಠಾಯಿ ಮಂಜುನಾಥ್ , ಎಚ್ ರಾಜು , ಮಿಮಿಕ್ರಿ ರಾಜು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು

ವರದಿ ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

error: