December 22, 2024

Bhavana Tv

Its Your Channel

ಗುಂಡ್ಲುಪೇಟೆ ತಾಲ್ಲೂಕಿನ ನಲ್ಲೂರು ಏಳು ಹಳ್ಳಿಗೆ ಇಂದು ದೀಪಾವಳಿ ಹಬ್ಬ.

ವರದಿ:- ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

ಗುಂಡ್ಲುಪೇಟೆ ತಾಲೂಕಿನ ನಲ್ಲೂರು ಏಳು ಹಳ್ಳಿಗಳಿಗೆ ಬುಧವಾರ ಬರದೆ ಹಬ್ಬವನ್ನು ಆಚರಿಸುವುದಿಲ್ಲ ಎಂದು ಗ್ರಾಮಸ್ಥರು ಹಿಂದಿನಿOದಲೂ ನಡೆಸಿಕೊಂಡು ಬಂದಿದ್ದಾರೆ ಅದರಂತೆ ಇಂದು ವೀರನಪುರ, ಬನ್ನಿತಾಳಪುರ, ಮಾಡ್ರಳ್ಳಿ ,ಮಳವಳ್ಳಿ , ನೇನೇಕಟ್ಟೆ, ೫ ಗ್ರಾಮಗಳಲ್ಲಿ ಇಂದೂ ದೀಪಾವಳಿ ಹಬ್ಬವನ್ನುಆಚರಿಸಿದರು. ನಲ್ಲೂರು ಮತ್ತು ಬೆಂಡಗಳ್ಳಿ೨ ಗ್ರಾಮಗಳಲ್ಲಿ ಬಲಿಪಾಡ್ಯಮಿಯ ದಿನದಂದು ಹಬ್ಬವನ್ನು ಆಚರಿಸಲಾಗಿದೆ

ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರಾದ ವೀರಭದ್ರಪ್ಪ ಮಾಡ್ರಳ್ಳಿ ಮಾತನಾಡಿ ನಲ್ಲೂರು ಏಳು ಹಳ್ಳಿಗಳಿಗೆ ಹಿಂದೆ ಬುಧವಾರ ಬರದೇ ಹಬ್ಬವನ್ನು ಆಚರಿಸುವುದಿಲ್ಲಎಂದು ಹಿರಿಯರು ಮಾಡಿಕೊಂಡು ಬಂದಿದ್ದಾರೆ ಅದರಂತೆ ಯುಗಾದಿ ಮತ್ತು ದೀಪಾವಳಿಯನ್ನು ಬುಧವಾರ ಬಂದರೆ ಮಾತ್ರ ಮಾಡುತ್ತೇವೆ ಬೇರೆ ವಾರಗಳಲ್ಲಿ ಹಬ್ಬ ಬಿದ್ದರೆ ಮಾಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರಾದ ನಾಗೇಂದ್ರ ,ಮಲ್ಲೇಶ, ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ, ಇನ್ನು ಮುಂತಾದ ರೈತ ಮುಖಂಡರು ಗ್ರಾಮಸ್ಥರು ಹಾಜರಿದ್ದರು

error: