December 22, 2024

Bhavana Tv

Its Your Channel

ಕೇರಳ ರಾಜ್ಯದಿಂದ ತ್ಯಾಜ್ಯವಸ್ತು ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದು ಮೂಲೆಹೊಳೆ ಚೆಕ್ ಪೋಸ್ಟ್ ಗಳಲ್ಲಿ ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

ವರದಿ: ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

ಗುoಡ್ಲುಪೇಟೆ :- ಗುoಡ್ಲುಪೇಟೆ ಪಕ್ಕದ ರಾಜ್ಯ ಕೇರಳದಿಂದ ಇಂದು ಬೆಳ್ಳಂಬೆಳಗ್ಗೆ ವಾಹನವೊಂದರಲ್ಲಿ ತ್ಯಾಜ್ಯದ ಚೀಲಗಳು ಇದ್ದು ಅದನ್ನು ಗುಂಡ್ಲುಪೇಟೆಯ ಪಕ್ಕದಲ್ಲಿರುವ ಶ್ರೀರಾಮದೇವರ ಗುಡ್ಡದ ಪಕ್ಕ ತ್ಯಾಜ್ಯವನ್ನು ಸುರಿಯಲು ಬಂದಿದ್ದ ವಾಹನವನ್ನು ಕರ್ನಾಟಕ ಕಾವಲು ಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮತ್ತು ಸಂಘಟನೆಯವರು ತಡೆದು ಮತ್ತೆ ಕೇರಳಕ್ಕೆ ತ್ಯಾಜ್ಯವನ್ನು ಅದೇ ವಾಹನದಲ್ಲಿ ಹಿಂದಿರುಗಿಸಿದ್ದಾರೆ. ಇದು ನಡೆದಿದ್ದು ರಾಷ್ಟ್ರೀಯ ಹೆದ್ದಾರಿ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಕಂಡುಬoದಿದೆ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಪಕ್ಕದ ಕೇರಳ ರಾಜ್ಯದಿಂದ ತ್ಯಾಜ್ಯ ನಮ್ಮ ರಾಜ್ಯದ ಗಡಿ ಭಾಗಕ್ಕೆ ಬರುತ್ತಿದೆ ಎಂದರೆ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಇರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಲಿಕ್, ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಶೀದ್, ಸಲಹೆಗಾರರಾದ ಮುಬಾರಕ್, ಇಲಿಯಾಸ್, ವೆಂಕಟೇಶ್ ಗೌಡ್ರು, ಮಿಮಿಕ್ರಿ ರಾಜು, ಎಚ್ ರಾಜು ಇನ್ನು ಮುಂತಾದವರು ಹಾಜರಿದ್ದರು.

error: