December 22, 2024

Bhavana Tv

Its Your Channel

ನಾಳೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆದು ಸಂಯುಕ್ತ ಕಿಸಾನ್ ಮೋರ್ಚಾ ಚಳುವಳಿ

ಗುಂಡ್ಲುಪೇಟೆ. ಪಟ್ಟಣದ ಪ್ಲೇಗ್ ಮಾರಮ್ಮನ ದೇವಸ್ಥಾನದಲ್ಲಿ ನಡೆದ ರೈತ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆ ಗಳೊಂದಿಗೆ ಸಭೆ ನಡೆಸಿ ಕೇಂದ್ರ ಸರ್ಕಾರ ಜಾರಿಗೆ ತಂದೀದ್ದoತಹ ಕೃಷಿ ಕಾಯ್ದೆಗಳು ವಿವಾದಾತ್ಮಕ ಕಾಯ್ದೆಗಳು ಎಂದು ಪ್ರಧಾನಮಂತ್ರಿಗಳು ತಾವೇ ಹೆಸರಿಸಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ .ಇದನ್ನ ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸಿ ಪ್ರಧಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಮತ್ತು ನವಂಬರ್ ೨೬ರಂದು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಯನ್ನು ತಡೆದು ಸಂಯುಕ್ತ ಕಿಸಾನ್ ಚಳುವಳಿ ನಡೆಸಲಾಗುತ್ತಿದೆ ಆದ್ದರಿಂದ ಸಾರ್ವಜನಿಕರು ಮತ್ತು ರೈತ ಬಂಧುಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ತುಂಬು ಹೃದಯದ ಮನವಿಯನ್ನುಮಾಡಿಕೊಳ್ಳುತ್ತವೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರಾದ ಕಡಬೂರು ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರ ಈ ಒಂದು ನಿರ್ಧಾರವನ್ನು ಮೊದಲೇ ಪ್ರಧಾನಿಗಳು ಮಾಡಿದ್ದರೆ ೬೦೦ಹೆಚ್ಚು ಜನ ರೈತರ ಪ್ರಾಣ ಉಳಿಯುತ್ತಿತ್ತು ಆದರೆ ಕೇಂದ್ರ ಸರ್ಕಾರ ತೆಗೆದುಕೊಂಡ ರೈತ ವಿರೋಧಿ ನಿಲುವಿನಿಂದಾಗಿ ೬೦೦ಕ್ಕೂ ಹೆಚ್ಚು ರೈತರ ಪ್ರಾಣ ಹೋಗಿದೆ ಆದ್ದರಿಂದ ಕೇಂದ್ರ ಸರ್ಕಾರ ಮೃತ ಕುಟುಂಬಗಳಿಗೆ ತಲಾ ೨೫ ಸಾವಿರ ಪರಿಹಾರ ಧನ ಮತ್ತು ಅವರ ಕುಟುಂಬದಲ್ಲಿ ಅರ್ಹತೆಯನ್ನು ಹೊಂದಿರುವವರಿಗೆ ಒಂದು ಸರ್ಕಾರಿ ಉದ್ಯೋಗ ನೀಡಬೇಕು .ಎಂದು ಈ ಮೂಲಕ ತಿಳಿಸಿದರು .

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಡಬೂರು ಮಂಜುನಾಥ್ ,ಮಾಡ್ರಳ್ಳಿ ಮಾದೇವಪ್ಪ , ಕುಂದಕೆರೆ ಸಂಪತ್ತು, ಶಿವಪುರ ಮಹದೇವಪ್ಪ, ಸುಭಾಷ್ ಮಾಡ್ರಳ್ಳಿ, ಚಲವಾದಿ ಸೋಮಣ್ಣ ಆರ್, ನಾಗೇಂದ್ರ ಗುಂಡ್ಲುಪೇಟೆ, ಹುಲಸಗು೦ ದೀ ಮುತ್ತಣ್ಣ ,ಸುರೇಶ್ ನಾಯಕ್, ಇಮ್ರಾನ್ ,ಮಹೇಶ್ ,ಮೋಹನ್ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು

ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: