December 22, 2024

Bhavana Tv

Its Your Channel

ಎಂಟು ತಿಂಗಳುಗಳಿOದ ಪಡಿತರ ರೇಷನ್ ಇಲ್ಲದೆ ಪರದಾಡಿದ ಅಜ್ಜಿಯ ನೆರವಿಗೆ ನಿಂತ ಕರುನಾಡ ಯುವಶಕ್ತಿ ಸಂಘಟನೆ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಪುಟ್ಟಮ್ಮ ಎಂಬ ಅಜ್ಜಿಯ ಬೆರಳಿನ ಲಾಗಿನ್ ಬರುತ್ತಿಲ್ಲವೆಂದು ಎಂಟು ತಿಂಗಳಿoದ ಪಡಿತರ ರೇಷನ್ ವಿತರಿಸಿರಲಿಲ್ಲ ಈ ಅಜ್ಜಿಯ ಸಮಸ್ಯೆಯನ್ನು ಮನಗಂಡು ತಾಲೂಕಿನ ಕರುನಾಡ ಯುವಶಕ್ತಿ ಸಂಘಟನೆ ಅಧ್ಯಕ್ಷರಾದ ಮುನೀರ್ ಪಾಷಾ ನೇತೃತ್ವದಲ್ಲಿ ಒಂದು ತಿಂಗಳು ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಕಾಲಿಂಗ ಸ್ವಾಮಿ ಮಾತನಾಡಿ ಎಂಟು ತಿಂಗಳುಗಳಿAದ ಪಡಿತರ ರೇಷನ್ ಇಲ್ಲದೆ
ಮನಗಂಡ ಕರುನಾಡ ಯುವಶಕ್ತಿ ಸಂಘಟನೆಯವರಿಗೆ ಧನ್ಯವಾದಗಳು ಇಂತಹ ಎಷ್ಟು ಬಡ ಕುಟುಂಬ ವರ್ಗದವರಿಗೆ ಅನ್ಯಾಯ ಆಗುತ್ತಿದೆ ಹಾಗಾಗಿ ಎಲ್ಲಾ ಸಂಘಟನೆಯವರು ಕೂಡ ಇಂತಹ ಒಂದು ಕೆಲಸವನ್ನು ಮಾಡಿದರೆ ಹಸಿವು ಮುಕ್ತ ರಾಜ್ಯ ಆಗುತ್ತದೆ ಎಂದರು

ರೈತ ಸಂಘದ ಮುಖಂಡರಾದ ಶಾಂತಮಲ್ಲಪ್ಪ ಮಾತನಾಡಿ ಕಳೆದ ಎಂಟು ತಿಂಗಳಿAದ ಅಜ್ಜಿಗೆ ಪಡಿತರ ರೇಷನ್ ಬಂದಿಲ್ಲವೆAದರೆ ಅಧಿಕಾರಿಗಳು ಕೆಲಸ ಮಾಡದೆ ಏನು ಮಾಡುತ್ತಿದ್ದಾರೆ .ಮತ್ತು ಜನಪ್ರತಿನಿಧಿಗಳು ಹುಟ್ಟುಹಬ್ಬವನ್ನು ಮಾಡಿಕೊಳ್ಳುವುದು ಹೆಚ್ಚುಗಾರಿಕೆಯ ವಿಷಯವಲ್ಲ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷಾ , ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಅಡ್ಡು, ಸುಲೆಮಾನ್ , ಸಾಹಿತಿ ಕಾಳಿಂಗ ಸ್ವಾಮಿ , ರೈತ ಸಂಘದ ಮುಖಂಡರಾದ ಶಾಂತಮಲ್ಲಪ್ಪ ಮತ್ತಿತರರು ಹಾಜರಿದ್ದರು

ವರದಿ: ಸದಾನ0ದ ಕಣ್ಣೆಗಾಲ ಗುಂಡ್ಲುಪೇಟೆ

.

error: