
ಗುಂಡ್ಲುಪೇಟೆ ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹ೦ಗಳ ಗ್ರಾಮದಲ್ಲಿ ನಡೆದ ನಿವೇಶನದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ನಡೆದ ಘಟನೆ. ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ನಮಗೆ ನಿವೇಶನವಿದೆ ಹಕ್ಕುಪತ್ರ ನೀಡಿ ಸ್ವಾಮಿ ಎಂದು ಅಂಗಲಾಚಿ ಕಾಲಿಗೆ ಬಿದ್ದುಕೊಂಡು ಕೇಳಿಕೊಂಡಾಗ ಬಾವೋದ್ವೇಗದಿಂದ ಚಾಮರಾಜನಗರದ ಉಸ್ತುವಾರಿ ಸಚಿವ ವಿ ಸೋಮಣ್ಣ ಮಹಿಳೆಗೆ ಕಪಾಲಮೋಕ್ಷ ಮಾಡಿರುವ ಘಟನೆ ನಡೆದಿದೆ .
ಇದನ್ನು ತೀವ್ರವಾಗಿ ಖಂಡಿಸಿದ ಜೆಡಿಎಸ್ ಪಕ್ಷದ ವಕ್ತರರಾದ ಎನ್ ರಾಜುಗೌಡ ರವರು ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಜನ ಪ್ರತಿನಿಧಿಗಳ ಹತ್ತಿರ ಹೋದರೆ ಈ ರೀತಿ ಮಹಿಳೆಗೆ ಕಪಾಳ್ಯ ಮೋಕ್ಷ ಮಾಡಿರುವ ಘಟನೆಯನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ ಇದನ್ನು ಖಂಡಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿಯವರು ಒಂದು ಕಡೆ ಹೇಳುತ್ತಿದ್ದಾರೆ ನಮ್ಮದು ಶಿಸ್ತಿನ ಪಕ್ಷ ಸಂಸ್ಕೃತಿಯನ್ನು ಉಳಿಸುತ್ತೇವೆ ಎಂದು ಇನ್ನೊಂದು ಕಡೆ ಉಸ್ತುವಾರಿ ಸಚಿವ ವಿ ಸೋಮಣ್ಣ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಮುಂದಾದ ಮಹಿಳೆಗೆ ಕಪಾಲಮೋಕ್ಷ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಇದೇನಾ ನಿಮ್ಮ ಸಂಸ್ಕೃತಿ ಎಂದು ಎನ್ ರಾಜುಗೌಡ ರವರು ಮಾಧ್ಯಮದ ಮೂಲಕ ಸಚಿವ ವಿ ಸೋಮಣ್ಣನವರಿಗೆ ತಿಳಿಸಲಾಗಿದೆ
ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.