May 12, 2024

Bhavana Tv

Its Your Channel

ಚಾಮರಾಜನರ ಜಿಲ್ಲಾಧಿಕಾರಿಗಳ ಮನೆ ಇರುವ ನಗರದ ಪಿಡಬ್ಲ್ಯೂಡಿ ಬಡಾವಣೆ ಗಬ್ಬೆದ್ದು ನಾರುತ್ತಿದೆಂದು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ)ರಾಜ್ಯಾಧ್ಯಕ್ಷರಾದ ಲಕ್ಷ್ಮಿ ಮಹೇಶ್ ಆರೋಪ

ಚಾಮರಾಜನರ ಜಿಲ್ಲಾಧಿಕಾರಿ ಗಳಮನೆ ಇರುವ ನಗರದ ಪಿಡಬ್ಲ್ಯೂಡಿ ಬಡಾವಣೆಯು ನಗರಸಭೆಯ ದಿವ್ಯನಿರ್ಲಕ್ಷ್ಯಕ್ಕೆ ಒಳಗಾಗಿ ಗಬ್ಬೆದ್ದುನಾರುತ್ತಿದೆ. ಸಂಜೆ 4ಗಂಟೆಮೇಲೆ ಸೊಳ್ಳೆಗಳಿಗೆ ಹೆದರಿ ಮನೆಬಾಗಿಲು ಹಾಕಿ ಅವಿತುಕುರುವ ಪರಿಸ್ಥಿತಿ ಇದೆ. ಎಲ್ಲಾ ಚರಂಡಿಗಳು ಮುಚ್ಚಿಹೋಗಿವೆ ಎಲ್ಲಕಡೆ ಗಿಡಗಂಟೆ ಬೆಳೆದು ಸೊಳ್ಳೆಗಳು ಹಾಗೂ ಹಂದಿಗಳಿಗೆ ಆಶ್ರಯತಾಣವಾಗಿದೆ. ರಸ್ತೆಗಳು ಕಿತ್ತು ಹೋಗಿದೆ, ನಿರಂತರ ಮಳೆಯಿಂದ ಎಲ್ಲಾಕಡೆ ಕೊಳಕಾಗಿದ್ದು ಡೆಂಗ್ಯೂ, ಚಿಕನ್ ಗೂನ್ಯ ಹರಡುವ ಬೀತಿ ಎದುರಾಗಿದೆ.
ಜಿಲ್ಲಾಧಿಕಾರಿ ಮನೆ ರಸ್ತೆ ಮಾತ್ರ ಚನ್ನಾಗಿದೆ, ದಿನ ಕಸ ತೆಗೆದು ಶುದ್ಧವಾಗಿ ಇಡುವ ನಗರ ಸಭೆ ಅದರ ಅಕ್ಕಪಕ್ಕ ಇರುವವರು ಮನುಷ್ಯರಲ್ಲವೆ, ನಿನ್ನೆ ಮೊನ್ನೆ ಚಾಮರಾಜನಗರ ದಲ್ಲಿ ಬಾಡಿಗೆ ಮನೆ ಮಾಡಿರುವ ಉಸ್ತುವಾರಿ ಸಚಿವ ಸೋಮಣ್ಣ ಅವರ ಬಾಡಿಗೆ ಮನೆಗೆ ಅದೆಷ್ಟು ಬೇಗ ಅಚ್ಚುಕಟ್ಟಾಗಿ ರೋಡ್ ಮಾಡಿರುವ ನಗರಸಭೆ ರಾಜಕಾರಣಿಗಳಿಗೆ ಹಾಗೂ ಜಿಲ್ಲಾಧಿಕಾರಿ ಗಳಿಗೆ ಮಾತ್ರ ಕೆಲಸಮಡ್ತಿದೆ. ಇದೆ ಬಡಾವಣೆಯಲ್ಲಿರುವ ನ್ಯಾಯಾದೀಶರ ಮನೆಗಳ ಆವರಣ ಗಬ್ಬೆದ್ದು ನಾರುತ್ತೆ ಅವರ ಮನೆ ಮುಂದೆ ಕಿತ್ತೊಗಿರೊ ರಸ್ತೆ ಭಾಗ್ಯ. ನಗರಸಭೆ ಅಧಿಕಾರಿಗಳು ಸಂಜೆ 4ಗಂಟೆ ನಂತರ ಈ ಬಡಾವಣೆಯ ರಸ್ತೆಯಲ್ಲಿ ಬಂದು ಕೇವಲ ಅರ್ಧ ಗಂಟೆ ನಿಂತು ತೋರಿಸಲಿ ಎಂದು ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ)ರಾಜ್ಯಾಧ್ಯಕ್ಷರಾದ ಲಕ್ಷ್ಮಿ ಮಹೇಶ್ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮನೆ ಇರುವ ನಗರದ ಪಿಡಬ್ಲ್ಯೂಡಿ ಬಡಾವಣೆ ಗಬ್ಬೆದ್ದು ನಾರುತ್ತಿದೆ. ಎಂದು ಲಕ್ಷ್ಮಿ ಮಹೇಶ್ ಆರೋಪ.
ವರದಿ:-ಸದಾನಂದ ಕನ್ನೆಗಾಲ

error: