
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಶಾಲೆಯ ಎದುರು ಲಾವಣ್ಯ ಶಾಪಿಂಗ್ ಮುಂಭಾಗ ನಡೆದ ಕರ್ನಾಟಕ ಕಾವಲು ಪಡೆ ವತಿಯಿಂದ 67 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 12ನೇ ವರ್ಷದ ವಾರ್ಷಿಕೋತ್ಸವ ವನ್ನು ಹಮ್ಮಿಕೊಂಡಿದ್ದರು. ಇದರ ಉದ್ಘಾಟನೆಯನ್ನು ಕಾವಲು ಪಡೆಯ ಸಂಸ್ಥಾಪಕರಾದ ಎಂ. ಮೋಹನ್ ಕುಮಾರ್ ಗೌಡರುರವರು ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದವರು ಈ ದಿನ ಸಂವಿಧಾನ ದಿನಾಚರಣೆಯ ಇಂದು ಈ ಸುದಿನ ನಮ್ಮ ಕರ್ನಾಟಕ ಕಾವಲು ಪಡೆ ಸಂಘಟನೆಯವರು 67ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 12ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದಾರೆ. ಕನ್ನಡ ಸಂಘಟನೆಗಳು ಪ್ರಾಮಾಣಿಕತೆಯಿಂದ ಮತ್ತು ಪಾರದರ್ಶಕತೆಯಿಂದ ಸಮಾಜಕ್ಕೆ ಕೊಡುಗೆಯನ್ನು ನೀಡಿದರೆ ಮಾತ್ರ ಅವುಗಳು ಮುಂದೆ ಬರಲು ಸಾಧ್ಯ ಎಂದು ಕನ್ನಡ ಅಭಿಮಾನಿಗಳಿಗೆ ಕಿವಿ ಮಾತು ತಿಳಿಸಿದರು
. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಿದ್ದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾವಲು ಪಡೆಯರಾಜ್ಯ ಕಾರ್ಯದರ್ಶಿಯಾದ ಕರಿಗೌಡ ರು, ಕೊಡಗು ಜಿಲ್ಲಾಧ್ಯಕ್ಷರಾದ ಎಂ ಕೃಷ್ಣರವರು, ಶಿವು ಬಾಲಾಜಿ ರವರು ಚಲನಚಿತ್ರ ನಟ,ನಿವೃತ ಪ್ರಾಂಶುಪಾಲರಾದ ನಾಟಕ ಭಾರ್ಗವ ಕೆಂಪರಾಜು, ಮತ್ತು ನಿವೃತ್ತ ಶಿಕ್ಷಕರಾದ ಶ್ರೀಮತಿ ಲಕ್ಷ್ಮಿ ಪ್ರೇಮಕುಮಾರಿ ರವರು, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಲಕರಾದ ಸುಭಾಷ್ ಮಡ್ರಹಳ್ಳಿ, ತಾಲೂಕು ಸಂಚಲಕರಾದ ಆರ್ ಸೋಮಣ್ಣ, ಕನ್ನಡಪರ ಹೋರಾಟಗಾರರ ಬ್ರಹ್ಮಾನಂದ, ತಾಲೂಕು ಕಾವಲು ಪಡೆಯ ಅಬ್ದುಲ್ ಮಾಲಿಕ್, ಅಬ್ದುಲ್ ರಶೀದ್ ಕಾರ್ಯದರ್ಶಿಗಳಾದ ಮುಬಾರಕ್, ಮಹಮದ್ ಅಮೀರ್, ಇಲಿಯಾಸ್, ವೆಂಕಟೇಶ್ ಗೌಡ್ರು , ಮಡ್ರಹಳ್ಳಿ ರಂಗಸ್ವಾಮಿ,ಸಾಧಿಕ್ ಪಾಸಾ, ಕುಂಜು ಟ್ಟಿ, ಶಕೀಲ್, ಮಿಟಾಯಿ ಮಂಜು ,ಎಚ್ ರಾಜು, ಮಿಮಿಕ್ರಿ ರಾಜು, ರವಿಕುಮಾರ್ ಶಿವಪುರ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಕನ್ನಡದ ಅಭಿಮಾನಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ

More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.