May 10, 2024

Bhavana Tv

Its Your Channel

ಗುಂಡ್ಲುಪೇಟೆಯ ಕರುನಾಡು ಯುವಶಕ್ತಿ ಸಂಘಟನೆ ವತಿಯಿಂದ ಅದ್ದೂರಿಯಾಗಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿನಡೆದ ಅಖಿಲ ಭಾರತ ಕರುನಾಡು ಯುವಶಕ್ತಿ ಸಂಘಟನೆವತಿಯಿAದ 67ನೇ ಕನ್ನಡ ರಾಜ್ಯೋತ್ಸವವನ್ನು ದೀಪ ಬೆಳಗುವ ಮುಖಾಂತರ ಸಂಘಟನೆಯ ಸಂಸ್ಥಾಪಕರಾದ ವಸಂತ್ ಕುಮಾರ್ ಹಾಗೂ ರಾಜು ಗೌಡರವರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಮಾತನಾಡಿದ ಎನ್ ರಾಜುಗೌಡ ಅವರು ಇತಿಹಾಸದಲ್ಲಿ ಕನ್ನಡಿಗರೇ ಮೊದಲು ಕನ್ನಡ ಅಭಿಮಾನಿಗಳು ಕನ್ನಡ ಸಂಘಟನೆ ತಾಯಿ ಭುವನೆಶ್ವರಿಯ ಮಕ್ಕಳು ಸಂಘಟನೆ ಯಾವುದಾದರೇನು ಉದ್ದೇಶ ಒಂದೇ ಅಲ್ಲವೇ ಎನ್ನುವ ಮೂಲಕ ಕನ್ನಡಪರ ಅಭಿಮಾನಿಗಳಿಗೆ ತಿಳಿಸಿದರು. ಅನಂತರ ಜೂನಿಯರ್ ಅಪ್ಪು , ಚಂದ್ರು, ಮೌರ್ಯ, ಹಾಗೂ ಸಾಹಸ ಅಪ್ಪು ವೆಂಕಟೇಶ್ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತದನಂತರ ಸೈನಿಕರಿಗೆ ,ಪ್ರಗತಿಪರ ರೈತರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಸಾಹಿತಿಗಳಿಗೆ .ಪತ್ರಕರ್ತರಿಗೆ. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕರುನಾಡು ಯುವಶಕ್ತಿ ಸಂಘಟನೆಯ ಸಂಸ್ಥಾಪಕರ ನೇತೃತ್ವದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ಈಶ್ವರ್ ರವರನ್ನು ನೇಮಕ ಮಾಡಲಾಯಿತು. ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಸೈಯದ್ ಅನ್ಸರ್ ರವರನ್ನು ನೇಮಕ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬಂದAತಹ ಕನ್ನಡ ಪ್ರೇಮಿಗಳಿಗೆ ಬದುಕು ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಮಧುಮೇಹ ಹಾಗೂ ರಕ್ತದ ಒತ್ತಡವನ್ನು ತಪಾಸಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕರಾದ ವಸಂತ್ ಕುಮಾರ್, ರಾಜ್ಯ ಅಧ್ಯಕ್ಷರಾದ ಸರವಣ, ರಾಜ್ಯಪ್ರಧಾನ ಕಾರ್ಯದರ್ಶಿಯಾದ ಮುನೀರ್ ಪಾಷಾ, ನಿರೂಪಕರಾದ ಯೋಗೇಶ,ರಾಜ್ಯದ್ಯಕ್ಷರಾಗಿ ಯುವ ಘಟಕದ ಈಶ್ವರ, ಹಿರಿಯ ಸಾಹಿತಿಗಳಾದ ನಾಟಕ ಭಾರ್ಗವ ಕೆಂಪರಾಜು,ಕಾನೂನು ಸಲಹೆಗಾರರ ಉಮೇಶ್, ರಾಜ್ಯ ಮಾಧ್ಯಮ ಸಮಿತಿ ಸಲಹೆಗಾರರ ಮಹೇಂದ್ರ ಎಚ್, ತಾಲೂಕು ಮಾಧ್ಯಮ ಸಲಹೆಗಾರರಾದ ಶಿವಕುಮಾರ್ , ಸಂಘಟನೆಯ ಜಿಲ್ಲಾ ಘಟಕದ ಮುತ್ತಣ್ಣ, ಸಾಹಿತಿ ಕಾಳಿಂಗ ಸ್ವಾಮಿ, ಸುಭಾಷ್ ಮಾಡ್ರಹಳ್ಳಿ . ಸೋಮಣ್ಣ ಹಾಗೂ ಸಂಘಟನೆಯ ಪದಾಧಿಕಾರಿಗಳು ಕನ್ನಡದ ಅಭಿಮಾನಿಗಳು ಯುವಕರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: