May 20, 2024

Bhavana Tv

Its Your Channel

ಎಸ್.ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀವಲಿ ಪ್ರೌಢಶಾಲೆ ಶೇಕಡಾ 100% ಫಲಿತಾಂಶ

ಭಟ್ಕಳ: ತಾಲ್ಲೂಕಿನ ಶಿರಾಲಿಯ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಬಂದಿದ್ದು, ಕುಮಾರಿ ಮೊನೀಕಾ ಜಯಕರ ನಾಯ್ಕ 97.12% ಶೇಕಡಾ ಅಂಕ ಪಡೆಯುವುದರೊಂದಿಗೆ ಶಾಲೆಗೆ ಪ್ರಥಮ, ಕುಮಾರಿ ಶಾರದಾ ವೆಂಕಟೇಶ ದೇವಡಿಗ 94.56% ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಕುಮಾರ ಧವನ ಮಂಜುನಾಥ ನಾಯ್ಕ 92.32% ಅಂಕ ಪಡೆಯುವುದರೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಹಾಗೂ ಒಟ್ಟು ಈ ಬಾರಿ 115 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 88 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಥಮ ಭಾಷಾ ವಿಷಯ ಕನ್ನಡದಲ್ಲಿ ಅಂಕಿತ ಮಹೇಂದ್ರ ನಾಯ್ಕರ್ 125/125 ಮತ್ತು ಇಂಚರಾ ಶ್ರೀನಿವಾಸ ಮೊಗೇರ 125/125 ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ ಅಂಕಿತ ಮಹೇಂದ್ರ ನಾಯ್ಕರ್ 100/100 ಅಂಕ ಗಳಿಸಿ ಶಾಲೆಗೆ ಕಿರ್ತಿ ತಂದಿರುತ್ತಾರೆ.

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಾಧ್ಯಾಪಕರಾದ ಶ್ರೀಮತಿ ಮಮತಾ ಎಮ್. ಭಟ್ಕಳ್ ಹಾಗೂ ಶಿಕ್ಷಕ ವೃಂದ, ಶಾಲಾ ಆಡಳಿತ ಮಂಡಳಿಯವರಾದ ಶ್ರೀ ಚಿತ್ರಾಪುರ ಮಠದ ಪದಾಧಿಕಾರಿಗಳು , ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಟ್ಕಳ, ಮತ್ತು ಪಾಲಕರು, ಹಾಗೂ ಊರ ನಾಗರಿಕರು, ಅಭಿನಂದನೆ ಸಲ್ಲಿಸಿರುತ್ತಾರೆ.

error: