ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ಪ್ರೇರಣಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಶ್ರೀ ದಿವಂಗತ ಸಿದ್ದರಾಜು ಸ್ಮರಣಾರ್ಥಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೃಂದಾವನ ಆಸ್ಪತ್ರೆ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಿ. ನಾಗರಾಜುರವರು ರವರು ದೀಪ ಬೆಳಗುವ ಮುಖಾಂತರ ಕಾರ್ಯ ಕ್ರಮವನ್ನು ಉದ್ಘಾಟನೆ ಮಾಡಿದರು.ಈ ಶಿಬಿರದಲ್ಲಿ 270ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಶ್ರೀ ಮಲೆ ಮಹದೇಶ್ವರ ಪ್ರೇರಣಾ ಫೌಂಡೇಶನ್ ಟ್ರಸ್ಟ್ ನ ಫೌಂಡರ್ ಹಾಗೂ ಸಿ.ಇ.ಒ. ಶ್ರೀ ಮಂಜುನಾಥ ಪ್ರಸಾದ್ ಎ ನ್. ಎಸ್ . ಮಾತನಾಡಿ ಈ ಒಂದು ಆರೋಗ್ಯದ ತಪಾಸಣೆ ಶಿಬಿರದ ಅನುಕೂಲವನ್ನು ಸಾರ್ವಜನಿಕರು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಿದರು. ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ಮೂಡಿಬಂದಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದಎಚ್ ಎಮ್ ಗಣೇಶ್ ಪ್ರಸಾದ್,ಚಾಮೂಲ್ ನಿರ್ದೇಶಕರಾದ ಎಂ,ಪಿ, ಸುನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು,ಹಾಗೂ ರೈತ ಸಂಘದ ಅಧ್ಯಕ್ಷರಾದ ಹೊನ್ನೆಗೌಡನಹಳ್ಳಿ ಶಿವಮಲ್ಲು, ಹಾಗು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಬೃಂದಾವನ ಆಸ್ಪತ್ರೆಯ ಡಾ. ಅಗರ್ವಾಲ್, ಪಿಜಿಸಿಯನ್ ಡಾಕ್ಟರ್ ಚೈತ್ರ, ಡಾಕ್ಟರ್ ಮನೋರಂಜನಿ, ಡಾ. ಕೀರ್ತನ, ಬೃಂದಾವನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೂಳೆರೋಗ ತಜ್ಞರು, ಡಾಕ್ಟರ್ ರವೀಂದ್ರನ್ ,ಮತ್ತು ಕೀಲೂ ರೋಗ ತಜ್ಞರುಗಳು, ಹಾಗೂ ಮಕ್ಕಳ ತಜ್ಞರಾದ ಖಾದಿರ್ ಎಂ.ಡಿ .ಹಾಗೂ ಡಾ. ನಾಗೇಂದ್ರ ,ಕಣ್ಣಿನ ತಜ್ಞರಾದ ಡಾ.ಜಮುನಾ ಸೇರಿದಂತೆ ಮಣಿಕಂಠ ಮ್ಯಾನೇಜರ್, ಶಿವು ಇನ್ನು ಹತ್ತಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.