December 22, 2024

Bhavana Tv

Its Your Channel

ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ

ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ ಹಾಗೂ ಪೂಜ್ಯ ಮಹಾತ್ಮರ ಭಾವಚಿತ್ರಗಳ ಅನಾವರಣ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಮತ್ತು ಧಾರ್ಮಿಕ ಸಭೆ

ಗುಂಡ್ಲುಪೇಟೆ ತಾಲೂಕಿನ ಶಿವಕುಮಾರ ಪುರ ಅಥವಾ ಕುರಬರಹುಂಡಿ ಗ್ರಾಮದ ಶ್ರೀ ಚಿಕ್ಕವೀರ ದೇಶಿ ಕೇಂದ್ರ ಶಿವಾನುಭವ ಮತ್ತು ವಿರಕ್ತ ಮಠಕ್ಕೇ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಇಮ್ಮಡಿ ಮಹಾಂತ ಸ್ವಾಮಿಗಳವರ ಪಟ್ಟಾಧಿಕಾರ ಮಹೋತ್ಸವ ನೂತನವಾಗಿ ಇಂದು ಹಲವಾರು ಮಠಾಧಿಪತಿಗಳ ನೇತೃತ್ವದಲ್ಲಿ ಮತ್ತು ಹರ ಗುರು ಚರಮೂರ್ತಿಗಳು ನೇತೃತ್ವದಲ್ಲಿ ನಡೆಯಿತು.

ನೂತನ ಶ್ರೀಗಳು ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಶರಣ ದಂಪತಿಗಳಾದ ಶ್ರೀಮತಿ ಲಕ್ಷ್ಮಿ ದೇವಿ ಮತ್ತು ಶ್ರೀ ಜಯಣ್ಣನವರ ಜೇಷ್ಠ ಪುತ್ರರು, ಮೊದಲ ಹೆಸರು ಶರಣ ಶ್ರೀ ಉಗ್ರಾನದ ನಾಗರಾಜ, ಶ್ರೀ ಶ್ರೀ ವೀರಭದ್ರ ಸ್ವಾಮಿಗಳಾಗಿ ಇವರನ್ನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕುರುಬರಹುಂಡಿ ಶಿವಕುಮಾರ ಪುರ ಗ್ರಾಮದಲ್ಲಿರುವ ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದಪುರ ಸ್ವತಂತ್ರ ಸಲೀಂ ಲಾಖ್ಯ ವಿರಕ್ತ ಮಠದ ಶಾಖ ಮಠ ವಾದ ಶ್ರೀ ಚಿಕ್ಕವೀರ ದೇಶಿ ಕೇಂದ್ರ ಶಿವಾನಭವ ಮತ್ತು ವಿರಕ್ತ ಮಠಕ್ಕೆ ೨೦೨೦ ರಲ್ಲಿ ನಿಯೋಜಿತ ಉತ್ತರಾಧಿಕಾರಿಗಳನ್ನಾಗಿ ಶ್ರೀ ಮನ್ನೀ ರಂಜನ ಪ್ರಣವ ಸ್ವರೂಪಿ ಶ್ರೀ ಚೆನ್ನ ಬಸವ ದೇಶ ಕೇಂದ್ರ ಮಹಾಸ್ವಾಮಿಗಳವರು ಮತ್ತು ಶ್ರೀ ಸ್ಥಳ ಬ್ರಹ್ಮ ಶ್ರೀ ಶ್ರೀ ಗುರು ಶಾಂತ ಮಹಾ ಸ್ವಾಮಿಗಳವರು ಹಾಗೂ ಹರಗುರು ಚರಮೂರ್ತಿಗಳು ಶ್ರೀಮಠದ ಸದ್ಭಕ್ತರು ಹಾಗೂ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಇವರನ್ನು ನಿಯೋಜಿತ ಉತ್ತರಾಧಿಕಾರಿಗಳನ್ನಾಗಿ ನಿಯೋಜಿಸಲಾಯಿತು.

ನೂತನ ಶ್ರೀಗಳ ವರ ನುಡಿಯಲ್ಲಿ ಶ್ರೀಮಠದ ಸೇವೆ ಮತ್ತು ಅಭಿವೃದ್ಧಿಗಾಗಿ ತಮ್ಮ ಶರೀರ ಮತ್ತು ಪ್ರಾಣವನ್ನು ಮುಡಿಪಾಗಿರುವುದಾಗಿ ನುಡಿದಿರುತ್ತಾರೆ. ಈ ವಿರಕ್ತ ಮಠಕ್ಕೆ ಗ್ರಾಮದ ಸದ್ಭಕ್ತರಾದ ಶ್ರೀ ವೀರತಪ್ಪನವರ ಕುಟುಂಬ ವರ್ಗದವರು ೩ ಎಕರೆ ೧೪ ಗುಂಟೆ ಜಮೀನನ್ನು ಮತ್ತು ಶ್ರೀ ಮಣೆಗಾರ್ ಗಂಗಪ್ಪನವರ ಕುಟುಂಬ ವರ್ಗದವರು ಮೂರು ಎಕರೆ ಎಂಟು ಗುಂಟೆ ಜಮೀನನ್ನು ಶ್ರೀಮಠಕ್ಕೆ ದಾನವಾಗಿ ನೀಡಿದ್ದಾರೆ.
ಕಾರ್ಯಕ್ರಮದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಮಾತನಾಡಿದ ನೂತನ ಶ್ರೀಗಳು ಸ್ವಯಂ ಪ್ರೇರಣೆಯಿಂದ ಕುರುಬರಹುಂಡಿ ಅಥವಾ ಶಿವಕುಮಾರ ಪುರಕ್ಕೆ ದಾವಿಸಿದ್ದು ಎಲ್ಲರಿಗೂ ಸಂತೋಷದ ವಿಷಯವಾಗಿದೆ. ಸಮಾಜದಲ್ಲಿ ಮಠಮಾನ್ಯಗಳು ಜನರ ಮನಸ್ಸಿಗೆ ಸಾಂತ್ವಾನ ನೀಡುತ್ತವೆ ಅಲ್ಲದೆ ನೂತನ ಶ್ರೀಗಳು ಧಾರ್ಮಿಕರ ಚಿಂತನೆಗಳನ್ನು ಅನುಸರಿಸುತ್ತಿರುವುದು ಬಹಳ ಸಂತಸದ ವಿಷಯವಾಗಿದೆ ಹಾಗಾಗಿ ಭಕ್ತಾದಿಗಳು ಪ್ರೀತಿ ವಿಶ್ವಾಸ ನಂಬಿಕೆಯನ್ನು ಪ್ರತಿಯೊಬ್ಬ ಶ್ರೀಗಳನ್ನು ಕಂಡರೆ ಶಿವನನ್ನ ಕಂಡAತಾಗುತ್ತದೆ ಎನ್ನುವುದರ ಜೊತೆಗೆ ಭಕ್ತಾದಿಗಳಿಗೆ ಆಶೀರ್ವಚನ ನುಡಿದರು. ಅದರ೦ತೆ ಈ ಸಮಾಜದಲ್ಲಿ ದ್ವೇಷದಿಂದ ಅಸುಹೆಯಿಂದ ಏನನ್ನು ಸಾಧಿಸಲಾರರು ಪ್ರಶಾಂತ ಮನಸ್ಸಿನಿಂದ ಎಲ್ಲವನ್ನು ಸಾಧಿಸಬಹುದಾಗಿದೆ ಎಂದು ತಮ್ಮ ಹಿತ ನುಡಿಯಲ್ಲಿ ನುಡಿದರು.
ನೂತನ ಶ್ರೀಗಳು ಮಾತನಾಡಿ ನಾವು ಸ್ವಯಂ ಪ್ರೇರಿತವಾಗಿ ಸನ್ಯಾಸಿ ದೀಕ್ಷೆಯನ್ನು ಪಡೆಯಬೇಕೆಂದು ವಿದ್ಯಾರ್ಥಿ ದೆಸೆಯಿಂದ ನಾವು ಸಂಕಲ್ಪ ಮಾಡಿಕೊಂಡು ಬಂದಿದ್ದೇವೆ. ಹಾಗಾಗಿ ನಾವು ಯುವಕರಿಗೆ ಮಾದರಿಯಾದ ರೂಪದಲ್ಲಿ ಶ್ರೀಮಠವನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಪ್ರೀತಿಯಿಂದ ಮನೆ ಮಗನಂತೆ ಈ ಗ್ರಾಮದವರು ಮತ್ತು ತಾಲೂಕಿನ ಎಲ್ಲಾ ನೋಡಿಕೊಳ್ಳುತ್ತಿದ್ದಾರೆ ಹಾಗಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದೇನೆ ಎಂದು ತಮ್ಮ ಅನಿಸಿಕೆ ಮತ್ತು ಹಿತನುಡಿಯನ್ನು ನುಡಿದರು

ಈ ಶುಭ ಸಂದರ್ಭದಲ್ಲಿ ಶ್ರೀ ಮನ್ನಿ ರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಚನ್ನಬಸವ ಸ್ವಾಮಿಗಳು ಶ್ರೀ ಕ್ಷೇತ್ರ ಮಲ್ಲನ ಮೂಲೆ ಮಠ, ಶ್ರೀ ಸರ್ಪಭೂಷಣ ಮಹಾಸ್ವಾಮಿಗಳು ವಿರಕ್ತ ಮಠ ಹರವೆ, ಶ್ರೀ ಚನ್ನವೀರ ಮಹಾಸ್ವಾಮಿಗಳು ಶಿವಪೂಜೆ ಮಠ ಚಿಕ್ಕ ತುಪ್ಪುರು, ಶ್ರೀ ಚಿದಾನಂದ ಮಹಾಸ್ವಾಮಿಗಳು ಹೊಸಮಠ ಮೈಸೂರು, ಶ್ರೀ ಇಮ್ಮಡಿ ಮುರುಗರಾಜೇಂದ್ರ ಮಹಾಸ್ವಾಮಿಗಳು ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠ ಮರೆಯಾಲ, ಶ್ರೀ ಚನ್ನಬಸವ ಮಹಾಸ್ವಾಮಿಗಳು ಸಿಗ್ಮಲ್ಲೇಶ್ವರ ವಿರಕ್ತ ಮಠ ಚಾಮರಾಜನಗರ, ಯುವ ಮುಖಂಡರಾದ ಎಚ್ ಎಂ ಗಣೇಶ್ ಪ್ರಸಾದ್, ಶ್ರೀ ಗಂಗಾಧರ ಸ್ವಾಮಿಗಳವರು ಕಬ್ಬಿನ ಕೊಲೆಶ್ವರ ಮಠ ಗೋಪಾಲಪುರ ,ಸೇರಿದಂತೆ ಪರಮಪೂಜ್ಯರುಗಳು ಹರ ಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:ಸದಾನಂದ ಕನ್ನೆಗಾಲ

error: